ನವದೆಹಲಿ: ಕೇಂದ್ರ ಸರ್ಕಾರ ರಾಜ್ಯಕ್ಕೆ ಮತ್ತೊಂದು ಭರ್ಜರಿ ಸಿಹಿಸುದ್ದಿ ನೀಡಿದ್ದು, ರಾಜ್ಯ ಸರ್ಕಾರಗಳಿಗೆ ಬರಬೇಕಿರುವ ಜಿಎಸ್​ಟಿ ಪರಿಹಾರ ಮೊತ್ತದ ಪೈಕಿ ಎರಡನೇ ಕಂತು ಬಿಡುಗಡೆ ಆಗಿದೆ.

ಕರ್ನಾಟಕ ಸೇರಿ ಒಟ್ಟು 16 ರಾಜ್ಯಗಳಿಗೆ ಹಾಗೂ 3 ಕೇಂದ್ರಾಡಳಿತ ಪ್ರದೇಶಗಳಿಗೆ ಜಿಎಸ್​ಟಿ ಪರಿಹಾರ ಮೊತ್ತದ ಬಾಕಿ ಇರುವ ಎರಡನೇ ಕಂತಿನಲ್ಲಿ ಒಟ್ಟು 6 ಸಾವಿರ ಕೋಟಿ ರೂ. ನೀಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ.

ಕರ್ನಾಟಕ, ಆಂಧ್ರಪ್ರದೇಶ, ಅಸ್ಸಾಂ, ಬಿಹಾರ್​, ಗೋವಾ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಮೇಘಾಲಯ, ಒಡಿಶಾ, ತಮಿಳುನಾಡು, ತ್ರಿಪುರ, ಉತ್ತರಪ್ರದೇಶ, ಉತ್ತರಾಖಂಡ, ಕೇಂದ್ರಾಡಳಿತ ಪ್ರದೇಶಗಳಾದ ದೆಹಲಿ, ಜಮ್ಮು ಮತ್ತು ಕಾಶ್ಮೀರ ಹಾಗೂ ಪುದುಚೇರಿಗಳಿಗೆ ಈ ಹಣ ರವಾನೆ ಆಗಲಿದೆ. ಅಂದ್ಹಾಗೆ, ಅಕ್ಟೋಬರ್ 24ರಂದು ಜಿಎಸ್​​ಟಿ ಪರಿಹಾರ ಮೊತ್ತದ ಮೊದಲ ಕಂತು ಬಿಡುಗಡೆ ಮಾಡಿತ್ತು.