ಬಳ್ಳಾರಿ, ಇತ್ತಿಚೆಗೆ ಬಂದ ಬಾರಿ ಮಳೆಯಿಂದ ಸಿರುಗುಪ್ಪ ತಾಲ್ಲೂಕಿನಲ್ಲಿ ೯ ಸಾವಿರ ಎಕರೆ ಭತ್ತದ ಬೆಳೆ ನಾಶವಾಗಿದೆ ಅದೇ ರೀತಿ ಬಳ್ಳಾರಿ ತಾಲ್ಲೂಕಿನ ತಂಬ್ರಹಳ್ಳಿ, ಕಾರೆಕಲ್ಲು ವಿವಿಧ ಗ್ರಾಮಗಳಲ್ಲಿ ಬೆಳೆದ ಭತ್ತದ ಬೆಳೆ ನಾಶವಾಗಿದೆ. ಅಲ್ಲದೇ ೩೩೦ ಎಕರೆ ತೋಟಗಾರಿಗೆ ಬೆಳೆ ನಾಶವಾಗಿದೆ ಮಳೆಯಿಂದ ಬೆಳೆ ನಷ್ಟದಿಂದಾದ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಅಧ್ಯಯನ ತಂಡವು ಇಂದು ಜಿಲ್ಲೆಗೆ ಆಗಮಿಸಿ ದಡೆಸೂಗೂರು ಹಾಗೂ ಸಿರುಗುಪ್ಪ ತಾಲ್ಲೂಕಿನ ದೇವಿನಗರ ಕ್ಯಾಂಪ್‌ಗಳಿಗೆ ಭೇಟಿ ನೀಡಿದರು.
ಕೃಷಿ ಇಲಾಖೆಯ ಜಂಟಿ ಕಾರ್ಯದರ್ಶಿ ಹಾಗೂ ತಂಡದ ಮುಖ್ಯಸ್ಥ  ಆರ್.ಬಿ.ಸಿನ್ಹಾ ಅವರು ಮಾತನಾಡಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಮೂರು ತಂಡಗಳನ್ನು ನಿಯೋಜಿಸಿದೆ. ಈ ಮೂರು ತಂಡಗಳು ರಾಜ್ಯದಲ್ಲಿ ಭಾರಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದೆ. ಈ ತಂಡವು ಬಳ್ಳಾರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಸಂಚರಿಸಿ ಹಾನಿಗೊಳಗಾದ ಪ್ರದೇಶಗಳನ್ನು ಭೇಟಿ ನೀಡಿದ್ದೇವೆ. ಜಿಲ್ಲಾ ಆಡಳಿತ ಸಮಗ್ರ ವರದಿಯನ್ನು ನೀಡಿದ್ದು ನಾವು ವರದಿನ್ವಯ ಸ್ಥಳಗಳಿಗೆ ಭೇಟಿ ನೀಡಿದ್ದೇವೆ. ಜಿಲ್ಲಾ ಆಡಳಿತ ನೀಡಿದ ದಾಖಲೆ ಹಾಗೂ ವಾಸ್ತು ಸ್ಥಿತಿ ಭಿನ್ನವಾಗಿಲ್ಲ. ರೈತರು ಸಹ ನಮ್ಮ ಜೊತೆಯಲ್ಲಿ ಬಂದು ವಿವಿರ ಮಾಹಿತಿಯನ್ನು ನೀಡಿದ್ದಾರೆ. ನಾವು ಎಲ್ಲಾ ದಾಖಲೆಗಳನ್ನು ಪಡೆದುಕೊಂಡಿದ್ದು ಸಮಗ್ರ ವರದಿಯನ್ನು ಸರ್ಕಾರಕ್ಕೆ ಶೀಘ್ರವೇ ಸಲ್ಲಿಸಿ ರೈತರಿಗೆ ಪರಿಹಾರ ನೀಡಲು ಕ್ರಮಕೈಗೊಳಲಿದೆ ಎಂದರು.