ನವದೆಹಲಿ: ದಿನೇ ದಿನೆ ಕೋವಿಡ್ ಸೋಕಿನ ಮಂದಿ ಜಾಸ್ತಿ ಆಗುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರಕಾರ ಮತ್ತೊಂದು ಹೊಸ ನಿರ್ಧಾರ ತೆಗೆದುಕೊಂಡಿದ್ದು, ದಿನಸಿ ಅಂಗಡಿ ಮತ್ತು ತರಕಾರಿ ವ್ಯಾಪಾರಿಗಳನ್ನೆಲ್ಲ ಕೋವಿಡ್​-19 ಟೆಸ್ಟ್​ಗೆ ಒಳಪಡಿಸಿ ಎಂದು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.!

ಈ ವ್ಯಾಪಾರಿಗಳಿಂದ ಕೋವಿಡ್​ ಸೋಂಕು ಹರಡುವ ಸಂಭವ ಹೆಚ್ಚಿರುವುದರಿಂದ ಈ ಟೆಸ್ಟ್ ಮಾಡಿಸಬೇಕು ಎಂದು ಕೇಂದ್ರಾಡಳಿತ ಪ್ರದೇಶಗಳು ಮತ್ತು ರಾಜ್ಯಗಳಿಗೆ ಆರೋಗ್ಯ ಸಚಿವಾಲಯ ಸುತ್ತೋಲೆ ಕಳುಹಿಸಿದೆ.

ಕೋವಿಡ್ 19 ಈಗ ಹೊಸ ಪ್ರದೇಶಗಳಿಗೆ ಹರಡುತ್ತಿದ್ದು, ಆರಂಭದಲ್ಲೇ ಪತ್ತೆ ಹಚ್ಚಿ ಅಂಥ ಸೋಂಕಿತರನ್ನು ಹೋಮ್ ಐಸೋಲೇಷನ್​ಗೆ ಒಳಪಡಿಸಬೇಕು. ಇನ್​​ಫ್ಲುಯೆನ್ಝಾ ಲೈಕ್ ಇಲ್ನೆಸ್​ ಅಥವಾ ಸೀವಿಯರ್​ ಅಕ್ಯೂಟ್​ ರೆಸ್ಪಿರೇಟರಿ ಇಲ್ನೆಸ್​ ಗಳ ರೋಗ ಲಕ್ಷಣಗಳೂ ಕೋವಿಡ್ ಮಾದರಿಯಲ್ಲೇ ಇರುವ ಕಾರಣ ಈ ಬಗ್ಗೆ ನಿಗಾವಹಿಸಬೇಕು. ಸಾಮಾನ್ಯವಾಗಿ ಒಬ್ಬ ವ್ಯಕ್ತಿ ದಿನ ಒಂದರ ಸರಾಸರಿ 30 ಜನರ ಸಂಪರ್ಕಿಸುತ್ತಾನೆ. ಸೋಂಕಿತರ ವಿಚಾರದಲ್ಲಿ ಇದನ್ನು ಗಮನಿಸಬೇಕು ಹಾಗೂ ಆರೋಗ್ಯ ಸಚಿವಾಲಯದ ಸೆಕ್ರೆಟರಿ ರಾಜೇಶ್ ಭೂಷಣ್​ ತಿಳಿಸಿದ್ದಾರೆ.