ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ಖಚಿತ. ಬಿಜೆಪಿಯೇತರ ಸರ್ಕಾರ ಬಂದೇ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಅವರು ಐಟಿ  ದಾಳಿ ಹಿಂದೆ ಪ್ರಧಾನಿ ಮೋದಿ ಅವರ ನೇರ ಕೈವಾಡವಿದೆ. ಅವರ ಸೂಚನೆ ಇಲ್ಲದೆ ಈ ದಾಳಿಗಳು ನಡೆಯುವುದಿಲ್ಲ. ನಾವು ಸೋಲುತ್ತೇವೆ ಎಂಬ ಭಯದಿಂದ ಇಂತಹ ದಾಳಿಗಳಿಗೆ ಆದೇಶಿಸುತ್ತಿದ್ದು, ವಿಪಕ್ಷ ನಾಯಕರನ್ನು ದಮನ ಮಾಡಲು ಮುಂದಾಗಿದ್ದಾರೆ ಎಂದರು.

ಇದನ್ನು ನಿಲ್ಲಿಸದಿದ್ದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ. ಇಂತಹ ರಾಜಕೀಯ ಪ್ರೇರಿತ ದಾಳಿಗಳನ್ನು ಕೂಡಲೇ ನಿಲ್ಲಿಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ