ಚಿತ್ರದುರ್ಗ :ಕೆ.ಸಿ.ವೀರೇಂದ್ರ ಆಲಿಯಾಸ್  ಪಪ್ಪಿಯವರನ್ನು ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಅಡಿಯಲ್ಲಿ ದಾಖಲಿಸಲಾಗಿದ್ದ ಕೇಸ್ ಗೆ ಸರಿಯಾದ ಸಾಕ್ಷ್ಯಾಧಾರಗಳ ಕೊರತೆಯಿಂದ ಸಿಬಿಐ ವಿಶೇಷ ನ್ಯಾಯಾಲಯದಿಂದ ಕೇಸ್ ಖುಲಾಸೆ ಆಗಿದೆ.

ಏನಿದು ಪ್ರಕರಣ.!

ಚಳ್ಳಕೆರೆಯ ಉದ್ಯಮಿ ಹಾಗೂ ಚಿತ್ರನಟ ದೊಡ್ಡಣ್ಣ ಅಳಿಯ ಕೆ.ಸಿ.ವೀರೇಂದ್ರ ಮನೆಮತ್ತು ಗೋವಾದಲ್ಲಿನ ಕ್ಯಾಸಿನೊ, ಹುಬ್ಬಳ್ಳಿಯ ಕಚೇರಿ ಸೇರಿದಂತೆ 15 ಕಡೆ ಸಿಬಿಐ ದಾಳಿನಡೆಸಿತ್ತು. ಆಗ ವೀರೇಂದ್ರಮನೆಯ ಬಾತ್ ರೂಂನಲ್ಲಿ ಬಂಗಾರ ಹಾಗೂ ಹೊಸ ನೋಟ್  500 ರೂ. ಹಾಗೂ 2000 ರೂ. ಮುಖಬೆಲೆಯ ನೋಟುಗಳ ಕಂತೆಗಳು ಸಿಕ್ಕಿದ್ದವು. ಆ ಹಣ ಮತ್ತು ಬಂಗಾರ ಅಕ್ರಮ ಸಂಗ್ರಹ ಮಾಡಿದ್ದಾರೆ ಎಂದು ಪ್ರಕರಣ ದಾಖಲು ಮಾಡಿತ್ತು.

ಈ ಪ್ರಕರಣದ ತನಿಖೆ ನಡೆಸಿದ್ದ ಎ. ಅನ್ಬಳಗನ್ ಸೂಕ್ತ ಸಾಕ್ಷ್ಯಧಾರಗಳ ಕೊರತೆಯಿಂದ ಪ್ರಕರಣವನ್ನು ಮುಕ್ತಾಯಗೊಳಿಸುವುದಾಗಿ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದರು. ಹಾಗಾಗಿ ಕೆ.ಸಿ. ವೀರೇಂದ್ರ ಅವರ ಮನೆ ಮೇಲೆ ದಾಳಿ ನಡೆಸಿದಾಗ ವಶಪಡಿಸಿಕೊಂಡಿರುವ ದಾಖಲೆಗಳನ್ನು ಮರಳಿಸುವಂತೆ ನ್ಯಾಯಾಧೀಶ ಸದಾಶಿವ ಎಸ್. ಸುಲ್ತಾನ್ ಪುರಿ ಸಿಬಿಐ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದರಿಂದ ಪಪ್ಪಿ ಮೇಲೆಹಾಕಲಾಗಿದ್ದ ಕೇಸ್ ಖುಲಾಸೆಗೊಂಡಿದೆ ಇದರಿಂದ ಬಿಗ್ ರೀಲಿಫ್ ಸಿಕ್ಕಂತಾಗಿದೆ.