ಮೈಸೂರು: ಕೊರೊನಾ ಹಿನ್ನೆಲೆಯಲ್ಲಿ ದೇಶ/ರಾಜ್ಯದಲ್ಲಿ ನಡೆಯಬೇಕಾಗಿದ್ದ ಹಲವು ಪರೀಕ್ಷೆಯನ್ನು ಮುಂದೂಡಲಾಗಿತ್ತು. ಅದರಂತೆ ‘ಕೆಸೆಟ್ ಕೇಂದ್ರ, ಮೈಸೂರು’ ಕೂಡ ಪರೀಕ್ಷೆಯನ್ನು ಮುಂದೂಡಿತ್ತು.

ಆದರೆ ಈಗ ಮೈಸೂರು ವಿವಿ ನಡೆಸುವ ಕೆಸೆಟ್‌ ಪರೀಕ್ಷೆಯನ್ನು ಜೂನ್‌ 06, 2020 ನಿರ್ಧಾರ ಮಾಡಿದೆ. ಇದಲ್ಲದೇ ಕೆಸೆಟ್‌-2020 ಪರೀಕ್ಷೆಗೆ ಅರ್ಜಿಯ ದಿನಾಂಕವನ್ನು ಕೂಡ ರೂ.250 ದಂಡ ಶುಲ್ಕದೊಂದಿಗೆ ಆನ್‌ಲೈನ್‌ನಲ್ಲಿ ಮೇ 25 ರವರೆಗೆ ಸಲ್ಲಿಸಬಹುದಾಗಿದೆ. !