ಚಿತ್ರದುರ್ಗ: ಇಂದು ಕೆಲವು ಮಠಾಧೀಶರು ಭೇಟಿ ಮಾಡಿ ಮನವಿ ಮಾಡಿದ್ದಾರೆ ಲಿಂಗಾಯತ ಪ್ರತ್ಯೇಕ ಧರ್ಮದ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ ಸಂಪುಟ ಸಭೆಯಲ್ಲಿ ಚರ್ಚಿಸಿ ಮುಂದಿನ ತೀರ್ಮಾನ ಕೈಗ್ಗೊಳ್ಳಲಾಗುವುದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿ ಇಂದು ಹಮ್ಮಿಕೊಂಡಿದ್ದ ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿ ಸಿದ್ದರಾಮಯ್ಯ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ನನ್ನ ಮಗ ಯತೀಂದ್ರ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿಯಲ್ಲ. ಟಿಕೆಟ್ ಪಡೆಯಲು ಅರ್ಜಿಯನ್ನು ಹಾಕಿಲ್ಲ ನನ್ನ ಮಗ ಕಾಂಗ್ರೆಸ್ ಪಕ್ಷದ ಟಿಕೆಟ್ ಕೇಳಿಲ್ಲ. ವರುಣಾ ಕ್ಷೇತ್ರದಿಂದ ಅಭ್ಯರ್ಥಿಯಾಗುವ ಕುರಿತು ಜನರು ನಿರ್ಧರಿಸಬೇಕು’ ಎಂದು ತಿಳಿಸಿದ ಸಿ.ಎಂ. ಪಕ್ಷದ ಹೈಕಮಾಂಡ್ ಸಮೀಕ್ಷೆ ನಡೆಸಿ ಅಭ್ಯರ್ಥಿ ಯಾರಾಗಬೇಕು? ಎಂದು ನಿರ್ಧರಿಸಲಿದೆ. ಪಕ್ಷದಲ್ಲಿರುವ ಎಲ್ಲರೂ ಟಿಕೆಟ್ ಕೇಳಬಹುದು. ಆದರೆ, ವೀಕ್ಷಕರು ಸಮೀಕ್ಷೆಯ ವರದಿ ಆಧಾರದ ಮೇಲೆ ಟಿಕೆಟ್ ಹಂಚಿಕೆ ಮಾಡುತ್ತಾರೆ’ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಜನಪೇಕ್ಷೆ ಮೇರೆಗೆ ಚುನಾವಣ ಕಣಕ್ಕಿಳಿಯುವ ಬಗ್ಗೆ ತೀರ್ಮಾನ ವೀಕ್ಷಕರ ಸರ್ವೇ ಮೇರೆಗ ಹೈಕಮಾಂಡ ಟಿಕೆಟ್ ನೀಡುತ್ತದೆ ಟಿಕೆಟ್ ಕೇಳಲು ಎಲ್ಲರಿಗೂ ಹಕ್ಕಿದೆಶಾಸಕರ ಮಕ್ಕಳಿಗೆ ಟಿಕೆಟ್ ಬಗ್ಗೆ ಹೈಕಮಾಂಡ್ ಅಂತಿಮ ತೀರ್ಮಾನ ಎಂದು ತಿಳಿಸಿದರು

ವರುಣಾ ಕ್ಷೇತ್ರದ ಹಾಲಿ ಶಾಸಕರು ಸಿದ್ದರಾಮಯ್ಯ. ಆದರೆ, ೨೦೧೮ರ ಚುನಾವಣೆಯಲ್ಲಿ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ. ಆದ್ದರಿಂದ, ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಆದರೆ, ಟಿಕೆಟ್ ಆಕಾಂಕ್ಷಿಗಳಿಂದ ಕಾಂಗ್ರೆಸ್ ಅರ್ಜಿ ಆಹ್ವಾನ ಮಾಡಿತ್ತು. ಯತೀಂದ್ರ ಅವರು ಟಿಕೆಟ್ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿಲ್ಲ. ಎಂದರು.

ಈಶ್ವರಪ್ಪಗೆ ಇನ್ನೂ ಬಿಜೆಪಿ ಟಿಕೆಟ್ ಪಕ್ಕಾ ಇಲ್ಲ ಯಡಿಯೂರಪ್ಪ ಓರ್ವ ದೊಡ್ಡ ಸುಳ್ಳುಗಾರಬಿಜೆಪಿ ಉತ್ತರಪ್ರದೇಶದಲ್ಲೇ ಸೋತು ಸುಣ್ಣವಾಗಿದೆ ಸಿಎಂ ಮತ್ತು ಉಪಮುಖ್ಯಮಂತ್ರಿ ಕ್ಷೇತ್ರಗಳಲ್ಲೇ ಸೋಲುಂಡಿದೆ ಯೋಗಿ ಆದಿತ್ಯನಾಥ್ ಕರ್ನಾಟಕಕ್ಕೆ ಬಂದು ಭಾಷಣ ಮಾಡುತ್ತಾರೆಅವರದ್ದೇ ಅಲ್ಲಿ ಹಳಸಿದೆ, ಅವರ ಕ್ಷೇತ್ರದಲ್ಲೇ ಬಿಜೆಪಿ ಸೋತಿದೆ ಎಂದ ಅವರು ಪ್ರಧಾನಿ ಮೋದಿ ಕರ್ನಾಟಕಕ್ಕೆ ಹಿಂದುತ್ವದ ಭಾಷಣ ಮಾಡುತ್ತಾರೆ ಉತ್ತರಪ್ರದೇಶದಲ್ಲೇ ಹಿಂದುತ್ವ ಮೋಡಿ ನಡೆದಿಲ್ಲ ೨೦೧೯ರ ಲೋಕಸಭೆ ಹಾಗೂ ೨೦೧೮ರ ಕರ್ನಾಟಕ ಚುನಾಚಣೆಯಲಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದರು.