ಬೆಂಗಳೂರ: ಕೆಲಸ ಮಾಡದೇ ಸಂಬಳ ಪಡೆಯುವ ಸರಕಾರಿ ಶಾಲೆಯ ಮೇಸ್ಟ್ರುಗಳು ಎಷ್ಟು ಇದ್ದಾರೆ ಅಂದ್ರೆ  ಈ  ವರ್ಷ 261 ಪ್ರಾಥಮಿಕ ಶಾಲೆಗಳಲ್ಲಿ ಶೂನ್ಯ ದಾಖಲಾತಿ ಇದೆ. ಇಲ್ಲಿ ಒಟ್ಟು 229 ಶಿಕ್ಷಕರು ಕೆಲಸ ಮಾಡುತ್ತಿದ್ದು, ಪಾಠವೇ ಮಾಡದೇ ಸಂಬಳ ಪಡೆಯುತ್ತಿದ್ದಾರೆ. ಇದೇ ರೀತಿ 57 ಪ್ರೌಢ ಶಾಲೆಗಳಲ್ಲಿ 137 ಶಿಕ್ಷಕರು ಕೆಲಸವೇ ಮಾಡದೆ ವೇತನ ಗಳಿಸುತ್ತಿದ್ದಾರಂತೆ.

ಇನ್ನುಮುಂದೆ 50 ಮಕ್ಕಳಿಗಿಂತ ಕಡಿಮೆ ದಾಖಲಾತಿ ಇದ್ದರೆ ಅದನ್ನು ಹೆಚ್ಚಿಸುವ ಜವಾಬ್ದಾರಿ ಮುಖ್ಯಶಿಕ್ಷಕರು ಮತ್ತು ಶಿಕ್ಷಕರದ್ದಾಗಿರುತ್ತದೆ. ಶೂನ್ಯ ದಾಖಲಾತಿ ಇರುವ ಪ್ರಾಥಮಿಕ ಶಾಲೆಗಳು 25 ಹಾಗೂ ಪ್ರೌಢ ಶಾಲಾ ಶಿಕ್ಷಕರು 50 ಮಕ್ಕಳನ್ನು ಶಾಲೆಗೆ ಸೇರಿಸದಿದ್ದರೆ, ಸಿಇಒ ಅಲ್ಲಿನ ಶಿಕ್ಷಕರನ್ನು ಬೇರೆ ಶಾಲೆಗಳಿಗೆ ಮರು ನಿಯೋಜನೆ ಮಾಡಬೇಕೆಂದು ಪತ್ರದಲ್ಲಿ ತಿಳಿಸಲಾಗಿದೆಯಂತೆ.