ಚಿಕ್ಕಮಗಳೂರು : ರಾಜ್ಯ ಕೆಪಿಸಿಸಿಯ ನೂತನ ಅಧ್ಯಕ್ಷ ರಾಗಿ ಆಯ್ಕೆಯಾಗಿರುವ ಶಾಸಕ ದಿನೇಶ್ ಗುಂಡೂರಾವ್ ಹೆಸರು ಪ್ರಕಟವಾಗುತ್ತಿದ್ದಂತೆ ಬೆಂಗಳೂರಿನಿಂದಕುಟುಂಬ ಸಮೇತರಾಗಿ ಬಂದು ಶೃಂಗೇರಿ ಶಾರದಾಂಬೆ ದರ್ಶನ ಪಡೆದರು.

ಒಂದು ಕಡೆ ದಿನೇಶ್ ಗುಂಡೂರಾವ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ. ಇತ್ತ ಧರ್ಮಪತ್ನಿ ಟಬು ರಾವ್ ಅವರ ಹುಟ್ಟು ಹಬ್ಬದ ದಿನವೇ ಅಧ್ಯಕ್ಷರಾಗಿ ಆಯ್ಕೆ ಆಗಿರೋದು ವಿಶೇಷವಾಗಿತ್ತು.

ವಿಶೇಷ ಪೂಜೆಯನ್ನು ಸಲ್ಲಿಸುವ ವೇಳೆ ದಿನೇಶ್ ಗುಂಡೂರಾವ್ ಅವರ ಪತ್ನಿ ಟಬು ರಾವ್ ಅವರ ಇಬ್ಬರು ಮಕ್ಕಳಾದ ಅನನ್ಯ ರಾವ್ ಮತ್ತು ಅಮಿರಾ ರಾವ್ ಮತ್ತು ಕೆಪಿಸಿಸಿ ರಾಜ್ಯ ವೈದ್ಯಕೀಯ ಘಟಕದ ಪ್ರಧಾನ ಕಾರ್ಯದರ್ಶಿ ಡಾ.ನಿರಂತರ ಗಣೇಶ್ ‌ಉಪಸ್ಥಿತಿತರಿದ್ದರು.

ವಿಶೇಷ ಪೂಜೆಯ ನಂತರ ಭಾರತಿ ತೀರ್ಥ ಸ್ವಾಮೀಜಿಯ ದರ್ಶನ ಪಡೆದ ಕುಟುಂಬಸ್ಥರು ಸ್ವಾಮೀಜಿಯ ದರ್ಶನಪಡೆದರು.