ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್​​ಸಿ)ವು ಮೂರು ನೇಮಕಾತಿ ಅಧಿಸೂಚನೆಗಳನ್ನು ಹಿಂಪಡೆದಿದೆ.

ಗ್ರೂಪ್‌ ‘ಎ’ ಹಾಗೂ ‘ಬಿ’ ಗೆ ಸೇರಿದ 123 ಹುದ್ದೆಗಳು ಸೇರಿದಂತೆ ಗ್ರೂಪ್‌ ‘ಸಿ’ಯ 352 ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಹಿಂಪಡೆದಿದೆ. ಸದ್ಯ ಕೊರೋನಾ ಹಿನ್ನೆಲೆಯಲ್ಲಿ ಮಿತವ್ಯಯ ಸಾಧಿಸಲು, ಕೆಲ ನೇಮಕಾತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯುವಂತೆ ಸರ್ಕಾರ ಕೆಪಿಎಸ್​​ಸಿಗೆ ಸೂಚಿಸಿದೆ.