ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಸರ್ಕಾರಿ ನೌಕರರಿಗೆ ಸಿಹಿಸುದ್ದಿ ನೀಡಿದ್ದು, ಸರ್ಕಾರಿ ನೌಕರರು ಮುಂಬಡ್ತಿಗಾಗಿ ಇಲಾಖೆ ನಡೆಸುವ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು ಇನ್ಮುಂದೆ ಮೇಲಧಿಕಾರಿಗಳ ಲಿಖಿತ ಅನುಮತಿ ಪಡೆಯದೇ ನೇರವಾಗಿ ತಾವೇ ಅರ್ಜಿ ಭರ್ತಿ ಮಾಡಿ ಆನ್ ಲೈನ್ ನಲ್ಲಿ ಅಪ್ ಲೋಡ್ ಮಾಡಬಹುದು ಎಂದು ಕೆಪಿಎಸ್ ಸಿ ಹೊಸ ನಿಯಮ ಜಾರಿಗೆ ತಂದಿದೆ.

ಸರ್ಕಾರಿ ನೌಕರರು ಈ ಹಿಂದೆ ಮುಂಬಡ್ತಿಗಾಗಿ ಇಲಾಖೆ ನಡೆಸುವ ಪರೀಕ್ಷೆಗಳನ್ನು ಬರೆಯಲು ತಮ್ಮ ಘಟಕದ ಮೇಲಧಿಕಾರಿಗಳಿಂದ ಅನುಮತಿ ಪಡೆಯಬೇಕಿತ್ತು. ಲಿಖಿತ ಅನುಮತಿ ಪತ್ರ ಇದ್ದವರು ಮಾತ್ರ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದಿತ್ತು. ಆದರೆ ಇದೀಗ ಕೆಪಿಎಸ್ ಸಿ ಹೊಸ ನಿಯಮವನ್ನು ಜಾರಿಗೆ ತಂದಿದ್ದು, ಮುಂಬಡ್ತಿಗಾಗಿ ಇಲಾಖೆ ನಡೆಸುವ ಪರೀಕ್ಷೆಗೆ ನೌಕರರೇ ನೇರವಾಗಿ ಅರ್ಜಿ ಸಲ್ಲಿಸಬಹುದೆಂದು ಹೇಳಿದೆ.

ಈ ಹಿಂದಿನ ಪದ್ಧತಿಯಂತೆ ಪರೀಕ್ಷೆ ಬರೆಯಲು ಅರ್ಹರಾಗಿದ್ದರು ಕೂಡ ಕೆಲವೊಮ್ಮೆ ಮೇಲಧಿಕಾರಿಗಳ ಅನುಮತಿ ಸಿಗುತ್ತಿರಲಿಲ್ಲ. ಇದರಿಂದ ಬಹುತೇಕ ನೌಕರರು ಪರೀಕ್ಷೆಯಿಂದ ವಂಚಿತರಾಗುತ್ತಿದ್ದರು. ಈ ಕುರಿತು ನೌಕರರಿಂದ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಎನ್ ಒಸಿ ಪಡೆಯುವ ಪದ್ಧತಿಯನ್ನು ರದ್ದುಪಡಿಸಲಾಗಿದೆ.