ಚಿತ್ರದುರ್ಗ: ಜಿಲ್ಲಾ ಪಂಚಾಯಿತಿಯ ಕೆಡಿಪಿ ಸಭೆ ನಡೆಯಲೇ ಇಲ್ಲ. ಅಧಿಕಾರಿಗಳು ಶಾಲೆಗೆ ಬಂದ ಮಕ್ಕಳಂತೆ ರಜ ಸಿಕ್ಕಿದ್ದು ಫುಲ್ ಖುಷ್ ಆದರು.

ಏಕೆಂದರೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬಸವರಾಜನ್, ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಜಿಲ್ಲಾ ಪಂಚಾಯತ್‌ನ ಮಹಿಳಾ ಸದಸ್ಯರು ಸೇರಿದಂತೆ ಅವರ ಬೆಂಬಲಿಗರು ಸೇರಿಕೊಂಡು ಸಭೆ ನಡೆಯದಂತೆ ಘೋಷಣೆಗಳನ್ನು ಕೂಗಿದರು.

ಸಭೆಗೆ ಮುಂಚೆ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಸಭೆಯ ಸೀಟಿನಲ್ಲಿ ಆಸೀನರಾಗಿದ್ದರು. ಅಧಿಕಾರಿಗಳು ಹಾಜರಿದ್ದರು. ಆದ್ರೆ ಬಹಳ ವತ್ತು ಸಿಇಒ ಮಾತ್ರ ಸಭೆಗೆ ಹಾಜರಾಗಿರಲಿಲ್ಲ.

ಒಂದು ಕಡೆ ಸೌಭಾಗ್ಯ ಬಸವರಾಜನ್ ಕಡೆಯವರು ರಾಜೀನಾಮೆ ನೀಡಬಾರದೆಂದು ಘೋಷಣೆ ಹಾಕುತ್ತಿದ್ದರೆ, ಇತ್ತ ರಾಜೀನಾಮೆ ಕೊಡಿ ಎಂದು ಘೋಷಣೆಗಳನ್ನು ಹಾಕುತ್ತಿದ್ದರು.
ಇದರ ಮಧ್ಯೆ ಸಭೆ ನಡೆಯಲಿಲ್ಲ. ಅಧಿಕಾರಿಗಳು ಹೊರ ಬಂದರು. ಆನಂತರ ಭದ್ರತೆ ನಡುವ ಅಧ್ಯಕ್ಷೆ ಕಾರು ಹತ್ತಿದರು.

ಇಲ್ಲಿ ಪ್ರಶ್ನೆ ಎನಪ್ಪ ಅಂದ್ರೆ. ಕಳೆದ ತಿಂಗಳು ಗಲಾಟೆ ನಡುವೆ ಕೆಡಿಪಿ ಸಭೆ ನಡೆಯಿತು. ಆಗ ಮಳೆ ಬಂದಿರಲಿಲ್ಲ.

ಈಗ ಬರಗಾಲದ ಜಿಲ್ಲೆಗೆ ಮಳೆ ಬಂದಿದೆ. ಅಲ್ಪ ಸ್ವಲ್ಪ ಬೆಳೆದ ಬೆಳಗೆ ಸೈನಿಕ ಹುಳು ಬಾದೆ ಹೆಚ್ಚಾಗಿದೆ. ಇದರಂದ ಅನ್ನದಾತ ಕಂಗಾಲಾಗಿದ್ದಾನೆ. ಹುಳುಗಳನ್ನು ಹೋಗಲಾಡಿಸಲು ಏನು ಕ್ರಮ ಕೋಗೊಳಬೇಕು ಎಂಬುದು ಕೆಡಿಪಿ ಸಭೆಯಲ್ಲಿ ಚರ್ಚೆ ಆಗ ಬಹುದಿತ್ತು. ಅದು ಹೋಗಲಿ ಮಳೆ ಯಿಂದ ಕೆರೆ ಕುಂಟೆಗಳು ತುಂಬುವ ಹಂತಕ್ಕೆ ಬಂದಿವೆ. ಏನಾದರು ಕೊಡಿ ಬಿದ್ರೆ ಅನಾಹುತಗಳಾದರೆ ತಕ್ಷಣ ಏನು ಕ್ರಮಗಳನ್ನು ಕೈಗೊಳ್ಳಬಹುದು ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚೆಮಾಡಬಹುದಿತ್ತು. ಇಂತಹ ಮಹತ್ವದ ಸಭೆ ರಾಜಕಾರಣಿಗಳ ಕಿತ್ತಾಟದಿಂದ ಹಾಳಾಗಿದ್ದು ಜಿಲ್ಲೆಯ ಜನರು ಕ್ಷಮಿಸಲಾರರು.
ರಾಜೀನಾಮೆ ನಾಟಕ, ಒಡಂಬಡಿಕೆ ಆರೋಪ- ಪ್ರತ್ಯಾರೋಪ ಗಳ ಮಧ್ಯೆ ಜಿಲ್ಲೆ ನಲಗುವುದು ಗ್ಯಾರಂಟಿ ಅಲ್ವಾ.?