ರಾಯಚೂರು : ಹೌದು ರಾಜ್ಯದಲ್ಲಿ ಕೊರೊನಾ ವೈರಸ್ ಜಾಸ್ತಿ ಆಗುತ್ತಿರುವ ಸಂದರ್ಭದಲ್ಲಿ , ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಆನ್ ಲೈನ್ ಮೂಲಕ ಪರೀಕ್ಷೆ ನಡೆಸಲು  ಸಿದ್ಧತೆ ಮಾಡಿಕೊಂಡಿದೆ.!

ಆಗಸ್ಟ್ 14 ರಿಂದ 2 ನೇ, 3ನೇ ವರ್ಷದ ವಿದ್ಯಾರ್ಥಿಗಳಿಗೆ ಆನ್ ಲೈನ್ ಪರೀಕ್ಷೆ ನಡೆಸಲಾಗುವುದು. ಕೃಷಿ ವಿವಿ ವ್ಯಾಪ್ತಿಗೆ ಬರುವ ಕಾಲೇಜುಗಳಲ್ಲಿನ ಬಿ.ಟೆಕ್, ಎಂಎಸ್ ಸಿ ಅಗ್ರಿ, ಬಿಎಸ್ ಸಿ ಅಗ್ರಿ, ಪಿಹೆಚ್ ಡಿ ಮತ್ತು ಡಿಪ್ಲೋಮಾ ಅಭ್ಯಾಸ ಮಾಡುತ್ತಿರುವ 1,200 ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

ಕೃಷಿ ವಿವಿ ವ್ಯಾಪ್ತಿಗೆ ಬರುವ ಕಲಬುರಗಿ, ಭೀಮರಾಯನಗುಡಿ ಹಾಗೂ ರಾಯಚೂರಿನ ಕ್ಯಾಂಪಸ್ ನಲ್ಲಿ ಏಕಕಾಲಕ್ಕೆ ಪರೀಕ್ಷೆ ಆರಂಭಿಸಿ, ಆ.29 ರೊಳಗೆ ಪರೀಕ್ಷೆ ಮುಗಿಸಲು ಯೋಜನೆ ರೂಪಿಸಿಕೊಂಡಿದೆ ಎಂದು ತಿಳಿದು ಬಂದಿದೆ.