ಬೆಂಗಳೂರು: ಮುಖ್ಯ ಮಂತ್ರಿ ಕುಮಾರಸ್ವಾಮಿಯವರ ಸರಕಾರವನನ್ನು ಉರುಳಿಸಲು ಮುಂದಾದವರಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ನಂಜಾವಧೂತ ಸ್ವಾಮೀಜಿ ಹೇಳಿದ್ದಾರೆ.

ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ಅವರಿಗೆ ತೊಂದರೆ ನೀಡಿದರೆ ರಾಷ್ಟ್ರಮಟ್ಟದಲ್ಲಿ ನಮ್ಮ‌ ಸಮುದಾಯದ ಶಕ್ತಿ ಏನು ಅನ್ನೋದನ್ನ ತೋರಿಸುತ್ತೇವೆ. ಸದಾನಂದಗೌಡ ಕಾರ್ಯಕ್ರಮಕ್ಕೆ ಬಂದಿದ್ರೆ, ಅವರ ಮೂಲಕ‌ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂದೇಶ ರವಾನೆ ಮಾಡಬಹುದಿತ್ತು ಎಂದು ಹೇಳಿದರು.

ಇದೇ ವೇಳೆ ಅವರು ಮಾತನಾಡಿ ಳೆ ಸಮಸ್ಯೆ ಉಂಟು ಮಾಡಿದರೆ, ಮುಂದಿನ‌ ಚುನಾವಣೆಯಲ್ಲಿ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.