ಬೆಂಗಳೂರು: ಇಂದಿನಿಂದ ಬಹಿರಂಗ ಸಭೆಗೆ ಮುಕ್ತಾಯ ಹಂತದಲ್ಲಿರುವಾಗಲೇ ಕುಮಾರಣ್ಣ ಏಕೆ ಇಂತಹ ಮಾತನಾಡಿದ್ರು ಅಂತ ಜೆಡಿಎಸ್ ಕಾರ್ಯಕತರಿಗೆ ಶಾಕ್ ಆಗಿದೆಯಂತೆ.

ಅವರ ಮಾತನಾಡಿದ್ದು ಏನಪ್ಪ ಅಂದ್ರೆ ಈ ನಿಮ್ಮ ಕುಮಾರಸ್ವಾಮಿ ಬದುಕಿರಬೇಕು ಅಂದರೆ ಈ ಬಾರಿ ಜೆಡಿಎಸ್ ಗೆಲ್ಲಿಸಿ. ನನ್ನನ್ನು ಗೆಲ್ಲಿಸಿ ಬದುಕಿಸಿದರೆ ನಿಮ್ಮನ್ನು ನಾನು ಉಳಿಸುತ್ತೇನೆ. ನನ್ನನ್ನು ಬದುಕಿಸುವ ಶಕ್ತಿ ನಿಮ್ಮಲ್ಲಿ ಮಾತ್ರ ಇದೆ. ನಿಮಗಾಗಿ ಕೆಲಸ ಮಾಡಕ್ಕೆ ಸಿದ್ದ ಇದ್ದೇನೆ. ನನ್ನ ಅಭ್ಯರ್ಥಿಗಳನ್ನು ಗೆಲ್ಲಿಸಿ ಗೆಲ್ಲಿಸಿ ಅಲವತ್ತುಕೊಂಡಿದ್ದಾರೆ ಮತದಾರರಲ್ಲಿ

ಲಗ್ಗೆರೆಯಲ್ಲಿ ಇಂದು ತಮ್ಮ ಪಕ್ಷದ ಅಭ್ಯರ್ಥಿ ರಾಮಚಂದ್ರ ಪರ ಪ್ರಚಾರದಲ್ಲಿ ಈ ಮಾತುಗಳನ್ನು ಹೇಳುತ್ತಲೇ,   ಪಕ್ಷದ ಅಭ್ಯರ್ಥಿಗಳು ದುಡ್ಡು ದುಡ್ಡು ಅಂತ ಬಂದು ಕುಳಿತಿದ್ದಾರೆ. ನಾನು ಚಂದಾ ಎತ್ತಿ ಅವರಿಗೆಲ್ಲಾ ದುಡ್ಡು ಕೊಡಬೇಕಾಗಿದೆ. ನಾನೆಲ್ಲಿಂದ ತರಲಿ ಎಂದು ಹೇಳಿದ್ದು ಇದು ಕೂಡ ರಾಜಕೀಯ ಸ್ಟೆಂಟ್ ಇರಬಹುದಾ  ಎಂಬುದು ಸುದ್ದಿ.!