ರಾಯಚೂರು : ಸಂಕ್ರಮಣದ ಬಳಿಕ ಸಿಡಿ ಬ್ಲಾಸ್ಟ್ ಆಗುತ್ತೆ. ಒಬ್ಬೊಬ್ಬರು ಒಂದೊAದು ಸಿಡಿ ಬಿಡುಗಡೆ ಮಾಡುತ್ತಾರೆ ಎಂದು ಬಿಜೆಪಿ ಎಂಎಲ್ ಸಿ ಹೆಚ್.ವಿಶ್ವನಾಥ್ ಹೇಳಿದ್ದಾರೆ.

ಕರ್ನಾಟಕದಲ್ಲಿ ಈಗ ಮತ್ತೆ ಸನ್ ಸ್ಟ್ರೋಕ್ ಮುಂದುವರಿದಿದೆ. ಜನತಾ ಪರಿವಾರ ಸನ್ ಸ್ಟ್ರೋಕ್ ನಲ್ಲೇ ಮುಗಿದು ಹೋಯ್ತು. ಕಾಂಗ್ರೆಸ್ ಪಕ್ಷ ಕೂಡಾ ಸನ್ ಸ್ಟ್ರೋಕ್ ನಲ್ಲೇ ಹಾಳಾಯ್ತು. ಇವತ್ತು ಬಿಜೆಪಿ ಸಹ ಸನ್ ಸ್ಟ್ರೋಕ್ ನಿಂದಲೇ ಹಾಳಾಗುತ್ತಿದೆ. ಯಡಿಯೂರಪ್ಪರಿಂದಲೇ ಬಿಜೆಪಿ ಹಾಳಾಗುತ್ತದೆ ಎಂದು ಹೆಚ್.ವಿಶ್ವನಾಥ್ ತಿಳಿಸಿದ್ದಾರೆ.

ವಿಜಯೇಂದ್ರನ ಹಸ್ತಕ್ಷೇಪದಿಂದಲೇ ಶಾಸಕರು ಬಂಡೆದಿದ್ದಾರೆ. ಕುಟುಂಬ ರಾಜಕಾರಣದಿಂದ ಯಡಿಯೂರಪ್ಪ ಹಾಳಾಗ್ತಿದ್ದಾರೆ. ಇದಕ್ಕಾ ನಾವು ಧಂಗೆ ಎದ್ದು ರಾಜೀನಾಮೆ ನೀಡಿ ಬಂದಿದ್ದು, ಭ್ರಷ್ಟರಿಗೆ ಅಧಿಕಾರ ಕೊಡಲು ನಾವು ರಾಜೀನಾಮೆ ನೀಡಿದ್ದಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.