ತುಮಕೂರು: ಬಿಎಸ್ ಯಡಿಯೂರಪ್ಪನವರು ಶ್ರೀ ಶಿವಕುಮಾರಸ್ವಾಮಿರಿಂದ ಆಶೀರ್ವಾದ ಪಡೆದುಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದ ಮುಖ್ಯಮಂತ್ರಿ ಸ್ಥಾನದಲ್ಲಿದ್ದುಕೊಂಡು ಕುಮಾರಸ್ವಾಮಿಯವರು ಕಿಂಗ್ ಪಿನ್ ತರದ್ದ ಬೇಜವಾಬ್ದಾರಿ ಹೇಳಿಕೆಯನ್ನು ನೀಡಿರುವುದು ಸ್ಥಾನಕ್ಕೆ ಶೋಭೆತರುವಂತದ್ದಲ್ಲ ಎಂದರು.

ದಂಧೆ ನಡೆಸುವವರ ಮಾಹಿತಿ ಇದ್ರೆ ಅಂತವರ ವಿರುದ್ಧ ಕ್ರಮ ತೆಗೆದುಕೊಳ್ಳಿ. ಸುಮ್ಮನೆ ಬಿಜೆಪಿ ಮೇಲೆ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದು ಹೇಳಿದ್ರು.