ಚಿತ್ರದುರ್ಗ: ತುರುವನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಬೆಳಗಾವಿ ಜಿಲ್ಲೆ ನಿಪ್ಪಾಣಿಗೆ ಸ್ಥಳಾಂತರಿಗೊಳಿಸಿದ ರಾಜ್ಯ ಬಿಜೆಪಿ.ಸರ್ಕಾರದ ವಿರುದ್ಧ ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಡಿಸಿ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿದ್ರು.

ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್.ನವೀನ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ತುರುವನೂರು ಡಿಗ್ರಿ ಕಾಲೇಜನ್ನು ನಾವು ತರ್ತಿವಿ. ಕೈನಾಯಕರು ಮೆಡಿಕಲ್ ಕಾಲೇಜನ್ನು ಚಿತ್ರದುರ್ಗಕ್ಕೆ ವಾಪಸ್ ತರುವಂತೆ ಸವಾಲು ಹಾಕಿದಲ್ಲದೆ, ಕೈ ಶಾಸಕರಿಗೆ ಬಿಜೆಪಿ ನಾಯಕರು ಸಹ ಬೆಂಬಲಿಸ್ತೇವೆ.ತಾಕತ್ತಿದ್ರೆ ಡಿಕೆಶಿ ಮನೆ ಮುಂದೆ ಧರಣಿ ಮಾಡಲಿ ಎಂದು ಸವಾಲು ಹಾಕಿದ್ರು.

ಬಿಜೆಪಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕಾಗಿ 900 ಕೋಟಿ ಅನುಧಾನ ಬಿಡುಗಡೆ ಮಾಡಿತ್ತು. ನಂತರ ಬಂದ ಕಾಂಗ್ರೆಸ್ ಸರ್ಕಾರ  ಈ ಬಗ್ಗೆ ದ್ವನಿಎತ್ತಲಿಲ್ಲ.ಬೀದಿಗೆ ಇಳಿದು ಹೋರಾಡಲಿಲ್ಲ ಆಗ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದ ಆಂಜನೇಯ ಮೌನವಾಗಿದ್ರು.ಕೈ ಶಾಸಕರೆಲ್ಲ ಜಾಣಕುರುಡರಂತೆ ವರ್ತಿಸುತ್ತಿದ್ದಾರೆ. ರಘುಮೂರ್ತಿ ತಮ್ಮ ವರ್ಚಸ್ಸು ಉಳಿಸಿಕೊಳ್ಳಲು ಇಂತಹ ಹೋರಾಟ ಮಾಡುತ್ತಿದ್ದಾರೆ ಎಂದರು.

ಒಟ್ಟಿನಲ್ಲಿ ಕೈ- ಬಿಜೆಪಿ ಯವರ ಕೆಸರಾಟಕ್ಕೆ ಬಲಿ ಆಗುವವರು ಮಾತ್ರ……?