ಚಿತ್ರದುರ್ಗ: ಇಂದಿನ ದಿನದಲ್ಲಿ ನ್ಯಾಕ್ ಮಾನ್ಯತೆ ಪಡೆಯುವುದು ಅಗತ್ಯವಾಗಿದೆ ಇದು ಇದ್ದರೆ ಮಾತ್ರ ಸರ್ಕಾರದಿಂದ ಸೌಲಭ್ಯಗಳನ್ನು ಪಡೆಯಲು ಸಹಾಯವಾಗುತ್ತದೆ ಎಂದು ನ್ಯಾಕ್ ರಾಜ್ಯ ಸಂಯೋಜಕರಾದ ಸಿದ್ದಲಿಂಗಸ್ವಾಮಿ ತಿಳಿಸಿದರು.
ಚಿತ್ರದುರ್ಗ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಕಾಲೇಜು ಶಿಕ್ಷಣ ಸಂಸ್ಥೆ, ಜಂಟಿ ನಿರ್ದೇಶಕರ ಕಛೇರಿ ಶಿವಮೊಗ್ಗ ಮತ್ತು ಸರ್ಕಾರಿ ವಿಜ್ಞಾನ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಚಿತ್ರದುರ್ಗ ಮತ್ತು ದಾವಣಗೆರೆ ಕಾಲೇಜುಗಳ ಪ್ರಾಂಶುಪಾಲರು ಮತ್ತು ನ್ಯಾಕ್ ಸಂಯೋಜಕರ ಒಂದು ದಿನದ ನ್ಯಾಕ್ ಹೊಸ ಆಯಾಮಗಳ ಕುರಿತ ವಿಶೇಷ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಈ ಮುಂಚೆ ಕಾಲೇಜುಗಳಿಗೆ ಅನುದಾನ ಇರಲಿಲ್ಲ ತದ ನಂತರ ಸರ್ಕಾರದಿಂದ ಅನುದಾನ ಬರಲಾರಂಭಿಸಿತು, ಇದರ ಬದಲಾಗಿ ಸರ್ಕಾರ ನ್ಯಾಕ್ ಪದ್ದತಿಯನ್ನು ಜಾರಿ ಮಾಡುವುದರ ಮೂಲಕ ಕಾಲೇಜುಗಳಿಗೆ ಅಗತ್ಯವಾಗಿ ಬೇಕಾದ ಸೌಲಭ್ಯಗಳನ್ನು ನೀಡಲು ಮುಂದಾಗಿದ್ದರು ಇದನ್ನು ಪಡೆಯಲು ಕಾಲೇಜು ನ್ಯಾಕ್ ನೀಡಿದ ನಿಬಂಧನೆಗಳನ್ನು ಪೂರ್ಣ ಮಾಡಬೇಕಿತು, ೨೦೦೬ರಿಂದ ನ್ಯಾಕ್ ಪ್ರಾರಂಭವಾಗಿದ್ದು ಆಗ ೧೭೦೦೦ ಕಾಲೇಜುಗಳು ಮಾತ್ರ ಇದರ ವ್ಯಾಪ್ತಿಗೆ ಒಳಪಡಲಾಯಿತು ೨೦೧೭ರ ಡಿಸೆಂಬರ್‌ಗೆ ಪ್ರಪಂಚದಲ್ಲಿ ೪೦೦೦೦ ಕಾಲೇಜುಗಳು ಇದರ ವ್ಯಾಪ್ತಿಗೆ ಒಳಪಡಲಿವೆ ಎಂದರು.
ಯಾವುದೇ ಕಾಲೇಜುಗಳಾದರು ಸಹಾ ಯಾವ ರೀತಿ ಕೆಲಸ ಮಾಡುತ್ತಿದೆ ಎಂದು ಉಸ್ತುವಾರಿಯನ್ನು ನ್ಯಾಕ್ ಮಾಡುತ್ತದೆ, ಇಲ್ಲಿ ಶಿಕ್ಷಣದ ಪಠ್ಯ, ಅದರ ಗುಣಮಟ್ಟಕ್ಕೆ ಆದ್ಯತೆ ನೀಡಲಾಗುತ್ತದೆ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿ ತನ್ನ ಬದುಕನ್ನು ರೂಪಿಸಿಕೊಳ್ಳುವಂತಿರಬೇಕಿದೆ ಅದಕ್ಕೆ ಮಾನ್ಯತೆಯನ್ನು ನೀಡಲಾಗುತ್ತದೆ ಇದರಿಂದ ಕಾಲಕ್ಕೆ ತಕ್ಕಂತೆ ಕೆಲವೊಂದು ಬದಲಾವಣೆ ಮಾಡಲಾಗುತ್ತದೆ ಇದನ್ನು ತಿಳಿಸುವ ಕೆಲಸವನ್ನು ಈ ರೀತಿಯಾದ ಕಾರ್ಯಗಾರವನ್ನು ಮಾಡುವುದರ ಮೂಲಕ ತಿಳಿಸಲಾಗುತ್ತದೆ ಎಂದು ಸಿದ್ದಲಿಂಗಸ್ವಾಮಿ ತಿಳಿಸಿದರು.
ಪದವಿ ಕಾಲೇಜುಗಳು ಹೊಸ ಬೋಧನಾ ವಿಧಾನ ಆಳವಡಿಸಿಕೊಂಡು ಗುಣಮಟ್ಟದ ಶಿಕ್ಷಣ ನೀಡಬೇಕಿದೆ ವಿದ್ಯಾರ್ಥಿಗಳನ್ನು ಸರ್ವತೋಮುಖವಾಗಿ ರೂಪಿಸಲು ಪದವಿ ಶಿಕ್ಷಣ ಮಹತ್ವದ ಘಟ್ಟವಾಗಿದೆ. ಹಳೇ ಪದ್ಧತಿಗೆ ಜೋತು ಬೀಳದೆ ಹೊಸದಾಗಿ ಕಲಿಕೆ ಕ್ರಮ ರೂಢಿಸಿಕೊಂಡಲ್ಲಿ ಕಾಲೇಜಿಗೆ ಕೀರ್ತಿ ಬರುತ್ತದೆ ಎಂದ ಅವರು ಶಿಕ್ಷಣ, ಪಠ್ಯ ಪದ್ಧತಿಗಳು ಜೀವನ ಕ್ರಮ ಹಾಗೂ ಉದ್ಯೋಗ ಸೃಷ್ಠಿಗೆ ದಾರಿಯಾಗಬೇಕು. ಆಗ ಮಾತ್ರ ಅಭಿವೃದ್ಧಿ ಸಾಧ್ಯವಾಗುವ ಜತೆಗೆ ಜಿಡಿಪಿ ದರ ಸಹ ಏರಿಕೆ ಕಾಣುತ್ತದೆ ಎಂದು ತಿಳಿಸಿದರು.
ಪದವಿ ಶಿಕ್ಷಣ ಶಿವಮೊಗ್ಗ ವಿಭಾಗದ ಜಂಟಿ ನಿರ್ದೇಶಕ ಕೆ.ಪ್ರಸಾದ್ ಸೇರಿದಂತೆ ಕಾರ್ಯಗಾರದಲ್ಲಿ ಎಸ್‌ಕ್ಯೂಎಸಿಯ ಸಹ ಸಂಚಾಲಕರಾದ ಅನುಪಮ ಸಭಾಪತಿ, ಜಂಟಿ ನಿರ್ದೇಶಕರ ಕಛೇರಿಯ ವಿಶೇಷ ಅಧಿಕಾರಿ ವೇಣುಗೋಪಾಲ್, ವಿದ್ಯಾಚನ್ನ ಭಾಗವಹಿಸಿದ್ದರು, ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಸಣ್ಣಮ್ಮ ವಹಿಸಿದ್ದರು. ಪ್ರೋ,ಕೆ.ಕೆ.ಕಮಾನಿ ಸ್ವಾಗತಿಸಿದರೆ, ಶ್ರೀನಿಧೀ ಸ್ವರ್ಣ ಪ್ರಾರ್ಥಿಸಿದರು. ರತ್ನಗಿರಿ