ಚಿತ್ರದುರ್ಗ: ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಪಲ್ಟಿಯಾಗಿ ಇಬ್ಬರು ಯುವಕರು ಮೃತಪಟ್ಟಿಘಟನೆ ಸೇವಾಲಾಲ್‌ ಗುರುಪೀಠ ಸಮೀಪದಲ್ಲಿ ನಡೆದಿದೆ.

ಮೃತರು ದಾವಣಗೆರೆಯ ವಿದ್ಯಾನಗರದ ಜಯಪ್ಪ ಎಂಬುವರ ಪುತ್ರ ಕೆ.ಜೆ.ಸಚಿನ್‌ ಕುಮಾರ್‌ (24) ಹಾಗೂ ಶಿವಶಂಕರಪ್ಪ ಎಂಬುವರ ಪುತ್ರ ಸಚಿನ್ ಎಂದು ತಿಳದುಬಂದಿದೆ. ಕಾರಿನಲ್ಲಿದ್ದ ಅಮಿತ್‌ ಹಾಗೂ ರಘುವೀರ್‌ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಾಲ್ವರು ಯುವಕರು ಚಿತ್ರದುರ್ಗದಿಂದ ದಾವಣಗೆರೆಗೆ ಭಾನುವಾರ ರಾತ್ರಿ ಕಾರಿನಲ್ಲಿ ತೆರಳುತ್ತಿದ್ದರು. ಅತಿ ವೇಗವಾಗಿ ಸಾಗುತ್ತಿದ್ದ ಕಾರು ಸೀಬಾರ ಸಮೀಪ ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ರಸ್ತೆಯ ಎಡಬದಿಯ ತಗ್ಗಿಗೆ ಬಿದ್ದು ಪಲ್ಟಿಯಾಗಿದೆ. ತಲೆಗೆ ತೀವ್ರಸ್ವರೂಪದ ಪೆಟ್ಟು ಬಿದ್ದ ಪರಿಣಾಮ ಸಚಿನ್‌ಕುಮಾರ್‌ ಸ್ಥಳದಲ್ಲೇ ಮೃತಪಟ್ಟಿದ್ದರು. ಗಾಯಗೊಂಡಿದ್ದ ಸಚಿನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದ ತಿಳಿದುಬಂದಿದೆ.