ಬೆಂಗಳೂರು: ಆಂಧ್ರಪ್ರದೇಶ ನೋಂದಣಿ ಸಂಖ್ಯೆಯ ಕಾರಿನಲ್ಲಿ ಮೂವರು ಆರೋಪಿಗಳು ಇದ್ದರು‌. ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಸಿಟಿ‌ ಮಾರ್ಕೆಟ್ ಠಾಣೆ ವ್ಯಾಪ್ತಿಯಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಕಾರೊಂದನ್ನು ಪೊಲೀಸರು ತಡೆದು ತಪಾಸಣೆ ಮಾಡಿದ್ದು, ಕಾರಿನಲ್ಲಿದ್ದ ಬ್ಯಾಗ್‌ನಲ್ಲಿ  65 ಲಕ್ಷ ನಗದು ಪತ್ತೆಯಾಗಿದೆ.

ಬಂಧಿತರು ಆಂಧ್ರಪ್ರದೇಶದ ದಸ್ತಗೀರ್ (41), ಕಿರಣ್‌ಕುಮಾರ್ (30) ಹಾಗೂ ಮಸ್ತಾನ್ (30) ಬಂಧಿತರು. ಅವರಿಂದ 500 ಹಾಗೂ 2,000 ಮುಖಬೆಲೆಯ ನೋಟುಗಳಿರುವ 65 ಲಕ್ಷ ನಗದು ಜಪ್ತಿ ಮಾಡಲಾಗಿದೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ತಿಳಿಸಿದ್ದಾರೆ.