ಬೆಂಗಳೂರು: ಕಾರಿನ ಮಾಲೀಕ ಹೋಟಲ್ ಬಿಲ್ ಕೊಡಲು ಹೋದ. ಅತ್ತ ಕಾರಿನ ಚಾಲಕ ಬೊಂಡ ತಿನ್ನಲು ಹೊಂಟ. ಇತ್ತ ಕಾರಿನಲ್ಲಿದ್ದ  7 ಲಕ್ಷರೂಗಳನ್ನು ಕಳ್ಳ ಹೊತ್ತೊಕೊಂಡು ಹೋದ.!

ಆಗಿದ್ದು ಇಷ್ಟು ದಾವಣಗೆರೆ ಜಿಲ್ಲೆಯ ಜಗಳೂರಿನ ಉದ್ಯಮಿ ರಾಮಮೂರ್ತಿ ಯವರು , ಆನಂದ್ ರಾವ್ ಸರ್ಕಲ್ ಬಳಿಯ ಮೌರ್ಯ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು. ಊರಿಗೆ ಹೊರಡಬೇಕೆಂದು, ಕಾರಿನಲ್ಲಿ ಹಣವಿದ್ದ ಸೂಟ್‌ಕೇಸ್‌ ಹಾಗೂ ಇನ್ನಿತರ ಬ್ಯಾಗ್‌ಗಳನ್ನು ಕಾರಿನಲ್ಲಿಟ್ಟು ಚಾಲಕನನ್ನು ಕೂರಿಸಿ ಹೋಟೆಲ್‌ ಬಿಲ್‌ ಪಾವತಿಸಲು ಹೋದರು.

ಕಾರ್ ಚಾಲಕನಿಗೆ  ಪಕ್ಕದಲ್ಲೇ ರಸ್ತೆ ಬದಿ ಮಾರುತ್ತಿದ್ದ ಮೆಣಸಿನ ಕಾಯಿ ಬೋಂಡ ತಿನ್ನಲು ಆಸೆ ಆಗಿದೆ. ಬೊಂಡ ತಿನ್ನಲು ಹೊಂಟ.  ಆಗ ಕಳ್ಳ ಕಾರಿನ ಹಿಂಬದಿಯಿಂದ ಬಂದು ಕಾರಿನಲ್ಲಿದ್ದ ಹಣ ತೆಗೆದಿಕೊಂಡು ಪರಾರಿ ಆದ.

ಹೋಟೆಲ್ ಬಿಲ್ ಕೊಟ್ಟು ಬಂದ ರಾಮೂರ್ತಿಗೆ ಕಾರಿನಲ್ಲಿದ್ದ ಹಣದ ಬ್ಯಾಗ್ ನಾಪತ್ತೆ ಆಗಿದ್ದನ್ನು ನೋಡಿ. ತಕ್ಷಣ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ತನಿಖೆ ನಡೆಯುತ್ತಿದೆ. ಕಳ್ಳನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆಂದು ತಿಳಿದುಬಂದಿದೆ.