ಬೆಂಗಳೂರು: ದೋಸ್ತಿ ಸರಕಾರದಲ್ಲಿ ಬಹಳ ದಿನಗಳಿಂದ ಯಾರಿಗೆ ಸಚಿವ ಸ್ಥಾನ ಸಿಗುತ್ತೆ ಎಂಬ ಹಗ್ಗ ಜಗ್ಗಾಟಕ್ಕೆ  ಕೊನೆಗೂ ಮುಕ್ತಾಯಗೊಂಡಿದೆ.  

ಹಲವು ಶಾಸಕರು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಕಾಂಗ್ರೆಸ್ ನಿಂದ 15 ಸಚಿವರು ಮತ್ತು ಜೆಡಿಎಸ್ ನ ಹತ್ತು ಮಂದಿ ಸಚಿವರು ಪ್ರಮಾಣವಚನ ಸ್ವೀಕರಿಸಿದರು.

ಬೆಂಗಳೂರಿನ ರಾಜಭವನದಲ್ಲಿರುವ ಗಾಜಿನ ಮನೆಯಲ್ಲಿ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಿತು. ರಾಜ್ಯಪಾಲ ವಜುಭಾಯಿ ವಾಲಾ ನೂತನ ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು.

ಜೆಡಿಎಸ್ ನೂತನ ಸಚಿವರ ಪಟ್ಟಿ

ಎಚ್.ಡಿ.ರೇವಣ್ಣ

ಬಂಡೆಪ್ಪ ಕಾಶೆಂಪುರ

ಜಿ.ಟಿ.ದೇವೇಗೌಡ

ಮನಗೂಳಿ

ಗುಬ್ಬಿ ಶ್ರೀನಿವಾಸ್

ವೆಂಕಟರಾವ್ ನಾಡಗೌಡ

ಸಿ.ಎಸ್.ಪುಟ್ಟರಾಜು

ಸಾ.ರಾ.ಮಹೇಶ್

ಎನ್.ಮಹೇಶ್

ಡಿ.ಸಿ.ತಮ್ಮಣ್ಣ

ಕಾಂಗ್ರೆಸ್ ಪಕ್ಷದ ನೂತನ ಸಂಪುಟ ಸಚಿವರ ಹೆಸರುಗಳು

ಆರ್ .ವಿ.ದೇಶಪಾಂಡೆ

ಡಿ.ಕೆ.ಶಿವಕುಮಾರ್

ಕೆ.ಜೆ. ಜಾರ್ಜ್

ಕೃಷ್ಣಬೈರೇಗೌಡ

ಶಿವಶಂಕರ ರೆಡ್ಡಿ

ರಮೇಶ್ ಜಾರಕಿಹೊಳಿ

ಪ್ರಿಯಾಂಕ್ ಖರ್ಗೆ

ಯು.ಟಿ.ಖಾದರ್

ಜಮೀರ್ ಅಹ್ಮದ್

ಶಿವಾನಂದ ಪಾಟೀಲ್

ವೆಂಕಟರಮಣಪ್ಪ

ರಾಜಶೇಖರ್ ಪಾಟೀಲ್

ಪುಟ್ಟರಂಗಶೆಟ್ಟಿ

ಶಂಕರ್

ಜಯಮಾಲ

ಇವರುಗಳು ಪ್ರಮಾಣವಚನ ಸ್ವೀಕರಿಸಿದರು. ಆದ್ರೆ ಯಾರಿಗೆ ಯಾವ ಖಾತೆ ಎಂಬುದು ತಿಳಿಯ ಬೇಕಿದೆ.