ಬೆಂಗಳೂರು : ದೋಸ್ತಿ ಸರಕಾರದಲ್ಲಿ ಕಾಂಗ್ರೆಸ್ ನ ಯಾರು ಸಚಿವ ಸಂಪುಟದಲ್ಲಿ ಸೇರಬೇಕು ಎಂಬ ಗೊಂದಲ ಮುಂದುವರೆದ್ದು, ಮಂತ್ರಿ ಪಟ್ಟಕ್ಕಾಗಿ ಆಕಾಂಕ್ಷಿಗಳ ದಂಡು ದೆಹಲಿಗೆ ದೌಡಾಯಿಸಲು ಸಕಲ ಸಿದ್ದತೆ ಮಾಡಿಕೊಂಡವರಿಗೆ ಬರುವುದು ಬೇಡ ಅಂತ ಸಂದೇಶವನ್ನು ನೀಡಲಾಗಿದೆ ಯಂತೆ.

ಕಾಂಗ್ರೆಸ್ ನ ಹಿರಿಯ ನಾಯಕರು ದೆಹಲಿಗೆ ತೆರಳಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ಯೋಜನೆ ರೂಪಿಸಿದ್ದರು. ಆದರೆ ದೆಹಲಿ ಭೇಟಿ ದಿಢೀರ್ ರದ್ದಾಗಿದೆಏಕೆಂದರೆ ನಾಳೆ ಸಂಜೆಗೆ ಕೆ.ಸಿ.ವೇಣುಗೋಪಾಲ ರು ಯಾರಿಗೆ ಮಂತ್ರಿ ಪಟ್ಟ ಎಂಬ ಪಟ್ಟಿಯನ್ನು ರೆಡಿಮಾಡಿದ್ದಾರಂತೆ. ಹಾಗೂ ಎರಡು ಖಾತೆಗಳನ್ನು ಹಾಗೇ ಉಳಸಿಕೊಳ್ಳಲಿದ್ದಾರಂತೆ.

ಏನಾದರೂ ಖಾತೆ ಹಂಚಿಕೆ ವೇಳೆ ಯಾರಾದು ಮುನಿಸುಕೊಂಡರೆ ಅಂತವರಿಗೆ ಖಾತೆ ನೀಡಲು ಮುಂದಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.