ಚಿತ್ರದುರ್ಗ: ಬಿಜೆಪಿ ಕಾರ್ಯಕರ್ತರು ಡಿಸಿ ಸರ್ಕಲ್ ಬಳಿ ಜೈಲ್ ಭರೋ ಪ್ರತಿಭಟನೆ ನಡೆಸುತ್ತಿದ್ದಾಗ, ಪಕ್ಕದಲ್ಲಿರುವ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನ ನಡೆಸಿದಾಗ ಸ್ಥಳದಲ್ಲಿದ್ದ ಯುವ ಕಾಂಗ್ರೇಸ್ ಪದಾಧಿಕಾರಿಗಳು ಇವರನ್ನು ತಡೆಯುವ ಪ್ರಯತ್ನ ಮಾಡಿದರು.

ಈ ಸಮಯದಲ್ಲಿ ಬಿಜೆಪಿಯವರು ಕೇಂದ್ರ ಸರ್ಕಾರದ ಪರವಾಗಿ ರಾಜ್ಯ ಸರ್ಕಾರದ ವಿರುದ್ಧವಾಗಿ ಘೋಷಣೆಗಳನ್ನು ಕೂಗಲಾರಂಭಿಸಿದರೇ, ಇತ್ತ ಕೋಪಗೊಂಡ ಕಾಂಗ್ರೇಸ್ ಕಾರ್ಯಕರ್ತರು ಸಹಾ ಕೇಂದ್ರದ ವಿರುದ್ಧ ಮತ್ತು ರಾಜ್ಯ ಸರ್ಕಾರದ ಪರವಾಗಿ ಘೋಷಣೆಗಳನ್ನು ಹಾಕಿದರು.

ಬಿಜೆಪಿಯವರು ಮೋದಿ ಪರವಾಗಿ ಜೈಕಾರ ಹಾಕಿದರೆ ಕಾಂಗ್ರೇಸ್‌ನವರು, ರಾಹುಲ್ ಗಾಂಧಿಯವರ ಪರವಾಗಿ ಜೈಕಾರ ಹಾಕುವುದರ ಮೂಲಕ ತಮ್ಮ ತಮ್ಮ ನಾಯಕರ ಪರವಾಗಿ ನಿಂತರು.

ಆ ಕ್ಷಣ ಸ್ವಲ್ಪ ಬಿಗುವಿನ ವಾತಾವರಣ ಸೃಷ್ಠಿ ಆದಂತೆ ಕಂಡರೂ ಪೊಲೀಸರ ಮಧ್ಯಸ್ತಿಕೆಯಿಂದ ತಿಳಿಗೊಂಡಿತು.