ನವದೆಹಲಿ: ಕೆಟ್ಟ ಮೇಲೆ ಬುದ್ದಿ ಬಂತು ಎಂಬ ಗಾದೆಗೆ ಸತತ ಸೋಲಿನ ಕಹಿ ಉಣ್ಣುತ್ತಲೇ ಇರುವ ಕಾಂಗ್ರೆಸ್ ಪಕ್ಷ ಇದೀಗ ಹೊಸ ಅಧ್ಯಕ್ಷರ ಆಯ್ಕೆ ನಡೆಸುವುದಕ್ಕೆ ಡಿಜಿಟಲ್ ಸ್ಪರ್ಶ ನೀಡುವುದಕ್ಕೆ ಹೈಕಮಾಂಡ್ ತೀರ್ಮಾನಿಸಿದೆ. !

ಈ ಹಿನ್ನೆಲೆ ಎಐಸಿಸಿ ಪದಾಧಿಕಾರಿಗಳ ಡಿಜಿಟಲ್ ಫೋಟೋ ಸಂಗ್ರಹಿಸಿ ಕಳುಹಿಸಲು ಸೂಚನೆ ನೀಡಲಾಗಿದೆ. ಮುಂದಿನ ಕೆಲವೇ ವಾರಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಪಂಚರಾಜ್ಯ ಚುನಾವಣೆಗೂ ಮೊದಲೇ ಪಕ್ಷದ ಈ ಚುನಾವಣೆ ನಡೆಯಲಿದೆ. ಅಧ್ಯಕ್ಷರ ಅಧಿಕಾರವಧಿ 2 ವರ್ಷವಾಗಿದ್ದು, ಪ್ರತಿ 2 ವರ್ಷಕ್ಕೊಮ್ಮೆ ಚುನಾವಣೆ ನಡೆಯಲಿದೆ ಎಂದು ತಿಳಿದುಬಂದಿದೆ.