ಬೆಂಗಳೂರು : ಕಾಂಗ್ರೆಸ್ ನ ಪ್ರಭಾವಿ ನಾಯಕ ಲಿಂಗಾಯಿತರ ಮುಖಂಡ ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಪತ್ರವನ್ನು ರಾಹುಲ್ ಗಾಂಧಿಯವರಿಗೆ ಕಳುಹಿಸಿದ್ದಾರೆ.!

ಕಾಂಗ್ರೆಸ್ ನ ಮೇಲ್ಮನೆ ಸದಸ್ಯರಾದ ಎಸ್.ಆರ್.ಪಾಟೀಲ್ ಅವರು ಕಳೆದ ವಾರವಷ್ಟೆ ಸಿದ್ದರಾಮಯ್ಯರನ್ನು ಭೇಟಿ ಮಾಡಿ ತನಗೂ ಸಚಿವ ಸ್ಥಾನ ನೀಡುವಂತೆ ಕೇಳಿಕೊಂಡಿದ್ದರು. ಆದ್ರೆ ಪಕ್ಷದಲ್ಲಿ ಹಿರಿಯರಿಗೆ ಮನ್ನಣೆ ಇಲ್ಲದಿರುವುದರಿಂದ ಹಾಗೂ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆ ಇಲ್ಲ ಎಂದು ಮನನೊಂದು ರಾಜೀನಾಮೆ ನೀಡಿದ್ದಾರಂತೆ.!

ಬುಧವಾರ ಸಚಿವ ಸಂಪುಟ ವಿಸ್ತರಣೆಗೆ ಮೂಹೂರ್ತ ಫಿಕ್ಸ್ ಮಾಡಿದೆ ಅದರ ಬೆನ್ನೆಲ್ಲೆ ಎಸ್.ಆರ್.ಪಾಟೀಲರು ರಾಜೀನಾಮೆ ಸುದ್ದಿ ರಾಜಕೀಯದಲ್ಲಿ ಹೊಸ ತಿರುವು ಪಡೆಯಲಿದೆಯಂತೆ.!