ಚಿತ್ರದುರ್ಗ: ಕಾಂಗ್ರೆಸ್ ನವರು ಕುಣಿಯಲಾರದವರು ನೆಲ ಡೊಂಕು ಎಂಬಂತೆ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಹೇಳಿದ್ದಾರೆ.

ಮೊಳಕಾಲ್ಮೂರು ನಲ್ಲಿ ಮಾತನಾಡಿದ ಅವರು ಐಟಿ, ಇಡಿ ಸ್ವತಂತ್ರ ಸಂಸ್ಥೆಗಳು, ಎಲ್ಲಿ ಬೇಕಾದರೂ ದಾಳಿ ಮಾಡಬಹುದು. ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದರು.

ನಮ್ಮ ಬೆಂಬಲಿಗರ ಮೇಲೂ ನಿನ್ನೆ ಐಟಿ ರೈಡ್ ಆಗಿದೆ. ಕಾಂಗ್ರೆಸ್ ನವರ ಮೇಲೆಯೂ ದಾಳಿ ಆಗಿದೆ.

ಬಾದಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ಬೆಂಬಲಿಗರು ಬೀಡು ಬಿಟ್ಟಿದ್ದಾರೆ. ಸೋಲಿನ ಭಯದಿಂದ ಗುತ್ತಿಗೆದಾರರನ್ನು ಕರೆತಂದಿದ್ದಾರೆ. ಅವರನ್ನು ಕ್ಷೇತ್ರದಿಂದ ವಾಪಾಸು ಕಳಿಸಬೇಕು ಎಂದರು.

ಸಮೀಕ್ಷೆಗಳು ಸುಳ್ಳಾಗಲಿವೆ, ಎರಡೂ ಕಡೆಗಳಲ್ಲಿ ನಾನು ಗೆಲ್ಲುತ್ತೇನೆ, ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದು ಹೇಳಿದ್ದಾರೆ.