ಬೆಳಗಾವಿ : ಕಾಂಗ್ರೆಸ್ ಪಕ್ಷದಲ್ಲಿ  ಬರ್ತ್ ಸರ್ಟಿಫಿಕೆಟ್ ಇದ್ರೆ ಸಾಕು ಪ್ರಧಾನಿ ಆಗುತ್ತಾರೆ ಎಂದು ಎಂಎಲ್ ಸಿ ನಟಿ ತಾರಾ ಹೇಳಿದ್ದಾರೆ.

ಎಬಿವಿಪಿಯ ರಂಗ್ ದೇ ಬಸಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೆಹರೂ ಅವರಿಂದ ಬರ್ಥ್ ಸರ್ಟಿಫಿಕೇಟ್ ಪಡೆದು ಇಂದಿರಾಗಾಂಧಿ ಪ್ರಧಾನಿ ಆದರು. ಹಾಗೇನೆ ಇಂದಿರಾ ಗಾಂಧಿಯಿಂದ ರಾಜೀವ್ ಗಾಂಧಿ ಪ್ರಧಾನಿ ಆದ್ರು, ನಂತರ ಸೋನಿಯಾ ಗಾಂಧಿ ಪಕ್ಷದ ಮುಂದಾಳತ್ವ ವಹಿಸಿದರು ಇದೀಗ ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷ ಸ್ಥಾನ ಅವರೇ ವಹಿಸಿದ್ದಾರೆ ಹೀಗೆ ಕುಟುಂಬ ರಾಜಕಾರಣ ಕಾಂಗ್ರೆಸ್ ನಲ್ಲಿದೆ ಎಂದರು.

ಬಿಜೆಪಿಯಲ್ಲಿ ಮಾತ್ರ ಸಾಮಾನ್ಯ ಕಾರ್ಯಕರ್ತ ಕೂಡ ಪ್ರಧಾನಿಯಾಗಲು ಅವಕಾಶವಿದೆ ಎಂದು ತಾರಾ ಹೇಳಿದರು.