ಬೆಂಗಳೂರು: ಹಾಗಂತ ಕಾಂಗ್ರೆಸ್ ನಲ್ಲಿ ಗುಸು ಗುಸು ಶುರುವಾಗಿದೆ. ಏಕೆಂದ್ರೆ ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಜಾರಕಿಹೊಳಿ ಸಹೋದರರ ನಡುವಿನ ಕಿತ್ತಾಟದಿಂದ ಕೆಲ ಕಾಂಗ್ರೆಸ್ ಶಾಸಕರು ಬಂಡಾಯ ಬಾವುಟ ಹಾರಿಸಲು ಮುಂದಾಗಿದ್ದಾರಂತೆ.

ಬೆಳಗಾವಿ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ವಿಚಾರವಾಗಿ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಕಿಚ್ಚು ಹತ್ತಿದೆಯಂತೆ.

ಡಿ.ಕೆ.ಶಿವಕುಮಾರ್ ಲಕ್ಷ್ಮೀ ಹೆಬ್ಳಾಳ್ಕರ್ ಪರ ನಿಂತಿರುವುದು ಜಾರಕಿಹೊಳಿ ಸಹೋದರರಿಗೆ ಇರುಸುಮುರುಸು ಉಂಟಾಗಿದೆ. ಇದರಿಂದ ಕೆಲ ಶಾಸಕರುಗಳಿಗೆ ಬೇಸರವಾಗಿದ್ದು ಇದೇ ರೀತಿಯಾಗಿ ಡಿಕೆಶಿ ಅವರು ಮುಂದುವರೆದರೆ ಬಂಡಾಯದ ಬಾವುಟ ಹಾರಿಸುವುದು ಗ್ಯಾರಂಟಿ ಎಂದು ಪರೋಕ್ಷವಾಗಿ ಸಂದೇಶ ಕಳುಹಿಸಿದ್ದಾರೆ ಎಂಬುದು ಸುದ್ದಿ.!