ಬೆಂಗಳೂರು: ಮಾಜಿ ಸಂಸದ ನಟ ಶಶಿಕುಮಾರ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿ ಮೊಳಕಾಲ್ಮೂರು ಕ್ಷೇತ್ರದಿಂ ಸ್ಪರ್ಧಿಸಲು ರೆಡಿ ಆಗಿದ್ದರೂ ಆದ್ರೆ ಕೊನೆಗಳಿಗೆಯಲ್ಲಿ ಕೈ ಟಿಕೆಟ್ ತಪ್ಪಿದ್ದರಿಂದ ಇಂದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಪದ್ಮನಾಭ ನಗರ ನಿವಾಸದಲ್ಲಿ ಇಂದು ದೇವೇಗೌಡರನ್ನು ಭೇಟಿ ಮಾಡಿದ ಶಶಿಕುಮಾರ್, ಪಕ್ಷಕ್ಕೆ ಸೇರಿಕೊಂಡರು. ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಶಶಿಕುಮಾರ್​ ಶ್ರೀರಾಮುಲು ಈಗಾಗಲೇ ಎಂಪಿ ಇದ್ದಾರೆ. ಅಧಿಕಾರ ಇದ್ದರೂ ಮೊಳಕಾಲ್ಮೂರಿಗೆ ಏಕೆ ಬಂದರು? ನಾನು ಚಿತ್ರದುರ್ಗದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದೆ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆ ಹೇಗಿದೆ ಗೊತ್ತಿದೆ. ಇದಲ್ಲದೇ ದೇವೇಗೌಡರು ಒಪ್ಪಿದರೆ ಹೊಸದುರ್ಗ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಸಿದ್ದನಿದ್ದೇನೆ ಎಂದು ಹೇಳಿದ್ದಾರೆ ಬಹುತೇಕ ಶಶಿಕುಮಾರ್ ಹೊಸದುರ್ಗ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ನೆಲೆಯಿಲ್ಲ ಜೆಡಿಎಸ್ ಗೆ ಭರವಸೆಯ ಬೆಳಕು ಬಂದಿದೆಯಂತೆ ಎಂಬುದು ಜೆಡಿಎಸ್ ಕಾರ್ಯಕರ್ತರು ಹೇಳುತ್ತಾರೆ.