ಕಲಬುರಗಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ಗಬ್ಬರ್ ಸಿಂಗ್ ಟ್ಯಾಕ್ಸ್‌’ ಅನ್ನು ಬದಲಾವಣೆ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದರು.

ಕಲಬುರಗಿಯಲ್ಲಿ ಕಾಂಗ್ರೆಸ್ ಪರಿವರ್ತನಾ ರ‍್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡುತ್ತಾ, ಪ್ರಧಾನಿ ಮೋದಿ ಇಡೀ ದೇಶವನ್ನೇ ಚೌಕಿದಾರ್ ಮಾಡಲು ಹೊರಟಿದ್ದಾರೆ. ಆರ್‌.ಬಿ.ಐ ಅನುಮತಿ ಇಲ್ಲದೇ ಪ್ರಧಾನಿ ಮೋದಿ ರಾತೋರಾತ್ರಿ 500, 1000 ರೂ.ಗಳ ನೋಟುಗಳನ್ನು ನಿಷೇಧಿಸಿಬಿಟ್ಟರು.

ಆದರೆ ಕಾಳಧನಿಕರು ಮಾತ್ರ ಬ್ಯಾಂಕಿನ ಹಿಂಬಾಗಿಲಲ್ಲಿ ಬಂದು ನೋಟು ಬದಲಿಸಿಕೊಂಡು ಹೋದರು ಆದರೆ ಜನಸಾಮಾನ್ಯರು ಮಾತ್ರ ಸರತಿ ಸಾಲಿನಲ್ಲಿ ನಿಂತು ಪರದಾಡಿದರು ಎಂದರು.

ಅದಾನಿಗೆ 6 ವಿಮಾನ ನಿಲ್ದಾಣಗಳನ್ನು ಬಿಟ್ಟುಕೊಟ್ಟಿರುವ ಮೋದಿ ರಫೇಲ್ ಒಪ್ಪಂದವನ್ನು ಅನಿಲ್‌ ಅಂಬಾನಿಗೆ ಲಾಭ ಮಾಡಿಕೊಟ್ಟಿದ್ದಾರೆ ಎಂದರು.