ಬೆಂಗಳೂರು: ತಮ್ಮನ್ನು ಸಚಿವ ಸಂಪುಟದಿ0ದ ಕೈಬಿಡಲಾಗುತ್ತಿದೆ ಎಂಬುದರ ಕುರಿತು ಅಬಕಾರಿ ಸಚಿವ ಎಚ್. ನಾಗೇಶ್ ಅವರು ಬೆಂಗಳೂರಿನಲ್ಲಿ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ. ಕಷ್ಟ ಕಾಲದಲ್ಲಿ ಬಿಜೆಪಿ ಸರ್ಕಾರದ ಕೈಹಿಡಿದ್ದೇನೆ. ಈಗ ಸರ್ಕಾರಕ್ಕೆ ಬಹುಮತ ಸಿಕ್ಕಿದೆ ಎಂದು ನನ್ನನ್ನು ಸಂಪುಟದಿAದ ಕೈಬಿಡುವುದು ತಪ್ಪು ಎಂಧೂ ಮಾಧ್ಯಮದ ಮುಂದೆ ಹೇಳಿದ್ದಾರೆ.

ಇಂದು ಬೆಳಗ್ಗೆ ೧೧.೩೦ಕ್ಕೆ ನಡೆಯುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಲು ಸಿಎಂ ಯಡಿಯೂರಪ್ಪ ಅವರು ಸೂಚಿಸಿದ್ದಾರೆ. ನಾನು ಸಂಪುಟ ಸಭೆಯಲ್ಲಿ ಭಾಗವಹಿಸುತ್ತಿದ್ದೇನೆ. ಮಂತ್ರಿಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸರ್ಕಾರ ಸೇರಿದ್ದೇನೆ. ಹೀಗಾಗಿ ಈಗ ರಾಜೀನಾಮೆ ಕೊಡಲು ಕಾರಣವೇ ಇಲ್ಲ ಎಂದು ಅಬಕಾರಿ ಸಚಿವ ಎಚ್. ನಾಗೇಶ್ ಸ್ಪಷ್ಟಪಡಿಸಿದ್ದಾರೆ.

ಸಂಪುಟ ಸಭೆಯ ಬಳಿಕ ಕೋಲಾರಕ್ಕೆ ತೆರೆಳಿ ಬೆಂಬಲಿಗರೊAದಿಗೆ ಚರ್ಚೆ ನಡೆಸುವುದಾಗಿ ಇದೇ ಸಂದರ್ಭದಲ್ಲಿ ನಾಗೇಶ್ ಹೇಳಿದ್ದಾರೆ. ಹೀಗಾಗಿ ಸಂಪುಟದಿAದ ನಾಗೇಶ್ ಅವರನ್ನು ಕೈಬಿಟ್ಟಲ್ಲಿ ಅವರು ಬಿಜೆಪಿಗೆ ಕೊಟ್ಟಿರುವ ಬೆಂಬಲವನ್ನು ವಾಪಾಸ್ ಪಡೆಯುವುದು ಬಹುತೇಕ ಖಚಿತ.

ತಮ್ಮನ್ನು ಸಂಪುಟದಿAದ ಕೈಬಿಟ್ಟಲ್ಲ. ಇದರ ಬಗ್ಗೆ ಮುಂದೇನು ಮಾಡಬೇಕೆಂದು ನಂತರ ತೀರ್ಮಾನ ಮಾಡುತ್ತೇನೆ. ಈಗಲೇ ಏನೂ ಹೇಳುವುದಿಲ್ಲ ಎಂದು ನಾಗೇಶ್ ಅವರು ಸ್ಪಷ್ಟಪಡಿಸಿದ್ದಾರೆ.