ಚಿತ್ರದುರ್ಗ: ದೀಪಾವಳಿ ಹಬ್ಬದಂದು ಲಕ್ಷ್ಮೀ ಪೂಜೆಗೆ ಇಡಲು ಎಸ್ ಬಿ ಐ ಬ್ಯಾಂಕಿನಿಂದ 7 ಲಕ್ಷ ಹಣ  ಡ್ರಾ ಮಾಡಿ ತೆಗೆದು ಕೊಂಡು  ಹೋಗುತ್ತಿದ್ದ ವೇಳೆ ಕಳ್ಳನೋರ್ವ ಬರೋಬ್ಬರಿ 7ಲಕ್ಷ ರೂಪಾಯಿ ಎಗರಿಸಿ ಪರಾರಿಯಾಗಿದ್ದಾನೆ.

ಘಟನೆ ನಡೆದಿದ್ದು ಹೀಗೆ ಅಡಿಕೆ ಮಂಡಿಯಲ್ಲಿ ಮ್ಯಾನೇಜರ್ ಆಗಿರುವ ಚಿತ್ರದುರ್ಗ ತಾಲೂಕಿನ ಭೀಮಸಮುದ್ರ ಗ್ರಾಮದ ಓಂಕಾರಪ್ಪ ನಿನ್ನೆ ಮಧ್ಯಾಹ್ನ ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯ ಬ್ಯಾಂಕಿನಲ್ಲಿ ಹಣ ಡ್ರಾ ಮಾಡಿಕೊಂಡು ಬೈಕ್ ಹಿಂಭಾಗ ಹಣ ಇರುವ ಬ್ಯಾಗ್ ಇಟ್ಟುಕೊಂಡು ಊರಿಗೆ ತೆರಳುತ್ತಿದ್ದರು, ಮಾರ್ಗ ಮಧ್ಯೆ ಮೋರ್ ಮಾಲ್ ಬಳಿ ಬೈಕ್ ನಿಲ್ಲಿಸಿ ಚಾಕಲೇಟ್ ತರಲು ಕಿರಾಣಿ ಅಂಗಡಿಗೆ ತೆರಳಿದ್ದರು.

ಇಂತಹ ಸಂದರ್ಭಕ್ಕಾಗಿ ಹೊಂಚು ಹಾಕುತ್ತಿದ್ದ ಕಳ್ಳ ಕ್ಷಣ ಮಾತ್ರದಲ್ಲಿ ಹಣ ಇಟ್ಟಿದ್ದ ಬ್ಯಾಗ್ ಎಗರಿಸಿ ಪರಾರಿಯಾಗಿದ್ದಾನೆ. ಹಣ ಕಳೆದುಕೊಂಡ ಓಂಕಾರಪ್ಪ ಕೂಡಲೇ ಕೋಟೆ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಸಿಸಿಟಿವಿ ದೃಶ್ಯ ಪರಿಶೀಲಿಸಿ ಕಳ್ಳನ ಪತ್ತೆಗೆ ಬಲೆ ಬೀಸಿದ್ದಾರೆ.