ಚಿತ್ರದರ್ಗ: ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವಂತೆ ರಾಷ್ಟ್ರೀಯ ಅಧ್ಯಕ್ಷ .ಅಖಿಲೇಶ್ ಯಾದವ್‌ರವರು ಸೂಚಿಸಿದ್ದಾರೆ ಎಂದು ಕರ್ನಾಟಕ ರಾಜ್ಯದ ಉಸ್ತುವಾರಿ ಮತ್ತು ರಾಜ್ಯ ಉಪಾಧ್ಯಕ್ಷ ಎನ್.ಮಂಜಪ್ಪ ತಿಳಿಸಿದರು.

ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಆಯ್ದ ಕ್ಷೇತ್ರಗಳಿಗೆ ಸ್ಪರ್ಧಿಸುವುದಾಗಿ ತಿಳಿಸಿರುತ್ತಾರೆ ಕರ್ನಾಟಕದ ಸಮಾಜವಾದಿ ಪಾರ್ಟಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರುಗಳು ಪಕ್ಷದ ಸಿದ್ಧಾಂತ ಮತ್ತು ಅಖಿಲೇಶ್ ಯಾದವ್‌ರವರ ಧೇಯೊದ್ದೇಶಗಳನ್ನು ಮತದಾರರಿಗೆ ತಲುಪುವಂತೆ ಕಾರ್ಯೋನ್ಮೋಖರಾಗಲು ಮನವಿ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡರಾದ ಎಸ್.ಜಿ.ಮಠ್, ರಾಕೇಶ್ ಯಾದವ್, ತೀರ್ಥಪ್ಪ ವಕೀಲರು, ಚಿದಾನಂದಮೂರ್ತಿ ಮತ್ತು ಡಿ.ಎಮ್.ರವೀಂದ್ರನಾಥ್ ಹಾಜರಿದ್ದರು

ಅಭಿನಂದನೆ ; ಗೋರಕ್‌ಪುರ್, ಪೂಲ್‌ಪುರ್‌ರಲ್ಲಿ ನಡೆದ ಲೋಕಸಭಾ ಉಪಚುನಾವಣೆಯಲ್ಲಿ ಹೆಚ್ಚಿನ ಅಂತರದಲ್ಲಿ ಸಮಾಜವಾದಿ ಪಾರ್ಟಿಯ ಅಭ್ಯರ್ಥಿಗಳು ಜಯಗಳಿಸಲು ಕಾರಣಿಬೂತರಾದ ರಾಷ್ಟ್ರೀಯ ಅಧ್ಯಕ್ಷರಿಗೆ ಮತ್ತು ಪಕ್ಷದ ವರಿಷ್ಠರಿಗೆ ಹಾಗೂ ೨ ಕ್ಷೇತ್ರದ ಪಕ್ಷದ ಕಾರ್ಯಕರ್ತರಿಗೆ ಹಾಗೂ ಮತ ಬಾಂಧವರಿಗೆ ಕರ್ನಾಟಕ ರಾಜ್ಯದ ಉಸ್ತುವಾರಿ ಮತ್ತು ರಾಜ್ಯ ಉಪಾಧ್ಯಕ್ಷರಾದ ಎನ್.ಮಂಜಪ್ಪನವರು ಅಭಿನಂದನೆ ಸಲ್ಲಿಸಿದ್ದಾರೆ.