ಚಿತ್ರದುರ್ಗ- ಕಲಾವಿದರಿಗೆ ಸರ್ಕಾರ ನೀಡುತ್ತಿರುವ ಸಾವಿರದ ಐದುನೂರು ಮಾಶಾಸನವನ್ನು ಐದು ಸಾವಿರ ರೂಪಾಯಿ ಗೆ ಹೆಚ್ಚಿಸಬೇಕೆಂದು ಮಾಜಿ ಶಾಸಕ ಹಾಗೂ ರಾಜ್ಯ ಕಲಾವಿದರ ಒಕ್ಕೂಟದ ಅಧ್ಯಕ್ಷ ಎಸ್.ತಿಪ್ಪೇಸ್ವಾಮಿ ಒತ್ತಾಯಿಸಿದರು.
ಮಂಗಳವಾರ ಮುರುಘಾಮಠದಲ್ಲಿ ರಾಜ್ಯ ಕಲಾವಿದರ ಒಕ್ಕೂಟದ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಲಾವಿದರು ಸಂಕಷ್ಟ ಪರಿಸ್ಥಿತಿಯಲ್ಲಿದ್ದಾರೆ ಕಲೆಯನ್ನು ಜೀವನದ ಭಾಗವಾಗಿ ನೆಚ್ಚಿಕೊಂಡಿರುವ ಬಹುತೇಕ ಕಲಾವಿದರು ಹಲವಾರು ಸಮಸ್ಯೆಗಳ ಸುಳಿಯಲ್ಲಿ ಜೀವನ ಸವೆಸುತ್ತಿದ್ದಾರೆ ಕಷ್ಟ ಪರಿಸ್ಥಿತಿಯಲ್ಲಿರುವ ಕಲಾಸೇವೆಯಲ್ಲಿ ತೊಡಗಿರುವಂತ ಹಿರಿಯ ಕಲಾವಿದರಿಗೆ ಸರ್ಕಾರ ನೀಡುತ್ತಿರುವ ಒಂದುವರೆ ಸಾವಿರ ಮಾಶಾಸನ ಯಾವುದಕ್ಕೂ ಸಾಕಾಗದು ಕಲಾವಿದರು ನಮ್ಮ ನಾಡಿನ ಸಂಪತ್ತು ಕಲಾವಿದರಿಂದಲೆ ನಾಡಿನ ಕಲೆ ಸಂಸ್ಕೃತಿ ಉತ್ತುಂಗದಲ್ಲಿರುವುದು ಕಲಾವಿದರ ಮೇಲೆ ಕನಿಷ್ಠ ಕಾಳಜಿ ಜನ ಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಇರಬೇಕು ಕಲಾವಿದರು ಸಮಾಜದ ಅಂಗವೆಂಬುದನ್ನು ಮನಗಂಡು ಮಾಶಾಸನವನ್ನು ಐದು ಸಾವಿರಕ್ಕೆ ಹೆಚ್ಚಿಸುವ ಮೂಲಕ ಕಲಾವಿದರ ನೆರವಿಗೆ ಬರಬೇಕೆಂದು ತಿಳಿಸಿದರು.
ಜಿಲ್ಲೆಯಲ್ಲಿಯೆ ಅತಿ ಹೆಚ್ಚು ಕಲಾವಿದರು ಮೊಳಕಾಲ್ಮೂರು ಮತ್ತು ಚಳ್ಳಕೆರೆ ಕ್ಷೇತ್ರದಲ್ಲಿ ಇದ್ದಾರೆ ನನ್ನ ಅಧಿಕಾರಾವಧಿಯಲ್ಲಿ ಅನೇಕ ಕಲಾವಿದರಿಗೆ ಸರ್ಕಾರದ ವಿವಿಧ ಇಲಾಖೆಯ ಮೂಲಕ ಮನೆ  ಸಾಲ ಸೌಲಭ್ಯ ಸಹಾಯಧನ ಕಲ್ಪಿಸಿದ್ದೇನೆ ಕಷ್ಟದಲ್ಲಿರುವ ಕಲಾವಿದರ ಮಕ್ಕಳ ಶಿಕ್ಷಣ ಮದುವೆ ಅನಾರೋಗ್ಯ ಪೀಡಿತರಿಗೆ ವೈಯಕ್ತಿಕವಾಗಿ ಹಣದ ಸಹಾಯ ನೀಡಿದ್ದೇನೆ ಇಷ್ಟೆಲ್ಲಾ ಸಹಾಯ ಮಾಡಿದರು ಸಹ ಕೆಲವರು ಕ್ಷಣಿಕ ಆಸೆ ಆಮಿಷ್ಯಗಳಿಗೆ ಬಲಿಯಾಗಿ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಲಿಲ್ಲ ಇದರಿಂದ ಚುನಾವಣೆಯಲ್ಲಿ ಸೋಲು ಅನುಭವಿಸಿದರು ಆತ್ಮಸ್ಥೈರ್ಯದಿಂದ ಇರಲು ನನ್ನಲ್ಲಿನ ಕಲಾಶಕ್ತಿಯ ಬಲದಿಂದ ಆದಕಾರಣ ಕಲಾವಿದರು ಎಷ್ಟೇ ನೋವು ಸಮಸ್ಯೆಗಳಿದ್ದರೂ ಸಹ ಆತ್ಮ ಸ್ಥೈರ್ಯ ಕಳೆದುಕೊಳ್ಳಬಾರದು ಸಮಸ್ಯೆಗಳನ್ನು ಎದುರಿಸುವ ಮನೋಬಲ ಬೆಳಸಿಕೊಳ್ಳಬೇಕೆಂದು ತಿಳಿಸಿದರು.
ಕೋಶಾಧ್ಯಕ್ಷ ಎಸ್.ವಿ.ಗುರುಮೂರ್ತಿ, ಪ್ರಧಾನ ಕಾರ್ಯದರ್ಶಿ ಡಿ.ಓ.ಮುರಾರ್ಜಿ, ನಿರ್ದೇಶಕರಾದ ಎಸ್. ಜಿ.ಪ್ರಭು, ಆಯಿತೋಳು ವಿರುಪಾಕ್ಷಪ್ಪ, ಹಿರಿಯೂರು ತಿಪ್ಪೇಸ್ವಾಮಿ, ಜ್ಯೋತಿ ನಾಗೇಶ್, ರಂಗ ನಿರ್ದೇಶಕ ಕೆಪಿಎಂ ಗಣೇಶಯ್ಯ, ಎಂ.ಕೆ.ಹರೀಶ್ ತಾಲ್ಲೂಕು ಅಧ್ಯಕ್ಷ ಎಂ‌.ಸಿ.ಮಂಜುನಾಥ್ ಮಾತನಾಡಿದರು.
ರಂಗಭೂಮಿ ಹಿರಿಯ ಕಲಾವಿದೆಯರಾದ ವಿಮಾಲಾಕ್ಷಮ್ಮ, ಪುಷ್ಪಮ್ಮ, ಗಾಯಕಿ ತ್ರಿವೇಣಿ, ಕಲಾವಿದರಾದ ಹುಲ್ಲೂರು ಕೃಷ್ಣಪ್ಪ, ಡಿ.ಶಿವರಾಜ್, ಜಗನ್ನಾಥ್, ಟಿ.ಮರಿಪಾಲಯ್ಯ, ಮಲ್ಲೂರಹಳ್ಳಿ ರಾಜಣ್ಣ, ಚನ್ನಬಸಪ್ಪ, ಶಂಕರ್, ಎ.ಡಿ.ತಿಪ್ಪೇಸ್ವಾಮಿ, ರಂಗನಾಥ, ತಿಪ್ಪೇಸ್ವಾಮಿ, ಜಯಣ್ಣ, ಮೋಹನ, ಕಾಂತರಾಜ್, ಸಿ.ಎಂ.ಬಾಬು, ಚಂದ್ರಯ್ಯ ಮತ್ತಿತರರು ಉಪಸ್ಥಿತರಿದ್ದರು.