ಕಲಬುರಗಿ: ಐತಿಹಾಸಿಕ ಸೂಫಿ ಸಂತಖಾಜಾ ಬಂದಾ ನವಾಜ್‌ ದರ್ಗಾದ ಉರುಸ್‌ ಅನ್ನು ಈ ಬಾರಿ ಕೈ ಬಿಡಲಾಗಿದೆ ಎಂದು ದರ್ಗಾದ ಮುಖ್ಯಸ್ಥ ಸಯ್ಯದ್‌ ಶಾ ಖುಸ್ರೊ ಹುಸೇನಿ ಸಜ್ಜಾದಾ ನಶೀನ್‌ ತಿಳಿಸಿದ್ದಾರೆ.‌

ಇದೇ ತಿಂಗಳು  6ರಿಂದ 10ರವರೆಗೆ ಉರುಸ್‌ ನಡೆಸಲು ಉದ್ದೇಶಿಸಲಾಗಿತ್ತು. ದೇಶದ ಎಲ್ಲೆಡೆ ಕೊರೋನಾ ಉಪಟಳ ಹೆಚ್ಚಿದೆ. ಹೀಗಾಗಿ, ಜನರ ಆರೋಗ್ಯ ಗಮನದಲ್ಲಿಟ್ಟುಕೊಂಡು ಉರುಸ್‌, ಗಂಧದ ಮೆರವಣಿಗೆ ಸೇರಿದಂತೆ ತಿಂಗಳವರೆಗೆ ನಡೆಯುವ ಜಾತ್ರೆಯನ್ನು ಕೈಬಿಡಲಾಗಿದೆ’ ಎಂದು ಅವರು ತಿಳಿಸಿದ್ದಾರೆ.