ಬೆಂಗಳೂರು:  ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ(ಕೆಸಿಎ) ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಕನ್ನಡದಲ್ಲಿ 13 ಚಲನಚಿತ್ರಗಳು, ಆರು ಧಾರಾವಹಿಗಳನ್ನು ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸಿದ್ದಾರೆ. ಅಲ್ಲದೆ ಹತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

ಕನ್ನಡದ 13 ಚಲನಚಿತ್ರಗಳ ಪೈಕಿ ಉಂಡೂಹೋದ ಕೊಂಡೂಹೋದ, ಅಮೆರಿಕ ಅಮೆರಿಕ, ಬಾನಲ್ಲೆ ಮಧುಚಂದ್ರಕ್ಕೆ, ಹೂಮಳೆ, ಸೂಪರ್ ಸ್ಟಾರ್, ಅಮೃತಧಾರೆ ಸೂಪರ್ ಹಿಟ್ ಚಿತ್ರಗಳಾಗಿವೆ.

ಖ್ಯಾತ ನಿರ್ದೇಶಕ, ನಿರ್ಮಾಪಕರಾದ ರಾಜೇಂದ್ರ ಸಿಂಗ್ ಬಾಬು ಅವರ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಾಗತಿಹಳ್ಳಿ ನೇಮಕಗೊಂಡಿದ್ದಾರೆ.