ಬೆಂಗಳೂರು: ಸರಕಾರದ ಇಬ್ಬಗೆಯ ನೀತಿಯಿಂದ ಕನ್ನಡ ಶಾಲೆಗಳು ಮುಚ್ಚು ಸ್ಥಿತಿಗೆ ಬಂದಿದೆ. ಬಜೆಟ್ ನಲ್ಲಿ ಸರಕಾರ ಕಡಿಮೆ ದಾಖಲಾತಿ ಇರುವ ಶಾಲೆಗಳ ವಿಲೀನದಿಂದ ಸುಮಾರು 28,847 ಶಾಲೆಗಳು ಮುಚ್ಚುತ್ತವೆ. ಮತ್ತೊಂದು ಕಡೆ ಕನ್ನಡ ಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನು ಹೇಳಿಕೊಡುವ ವಿಚಾರ ಕ್ಕೆ ಸಂಬಂಧಸಿದಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಜಿ ಸಿದ್ದರಾಮಯ್ಯ ಏನು ಹೇಳಿದ್ದಾರೆ.

ಕನ್ನಡ ಶಾಲೆಗಳ ವಿಲೀನ ಹಾಗೂ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಬೋಧಿಸುವ ಸರ್ಕಾರದ ನಿರ್ಧಾರಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ .ಸಿದ್ದರಾಮಯ್ಯ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಇದು ಕನ್ನಡಕ್ಕೆ ಮಾರಕವಾಗುವ ಕೆಲಸವಾಗಿದೆ. ಇದನ್ನು ಒಪ್ಪುವುದಕ್ಕೆ ಸಾಧ್ಯವೇ ಇಲ್ಲ. ಶಾಲೆಯ ವಿಲೀನ ಮಾಡುತ್ತಾರೆ ಅಂದ್ರೆ, ಅದು ಸರ್ಕಾರಿ ಶಾಲೆಯನ್ನು ಮುಚ್ಚುವ ಪ್ರಕ್ರಿಯೆಯಾಗಿದೆ. ಸರ್ಕಾರದಿಂದಲೇ ಆಂಗ್ಲ ಮಾಧ್ಯಮ ಶಾಲೆ ತೆರೆಯುತ್ತಾರೆ ಎಂದರೆ ಅದು ಕನ್ನಡಕ್ಕೆ ಕೊಡಲಿಯೇಟು ಎಂದು ಹೇಳಿದ್ದಾರೆ.