ಬೆಂಗಳೂರು: ಔತಣ ಕೂಟ ಇತ್ತು ಅಂತ ನನಗೆ ಗೊತ್ತಿಲ್ಲ ಆದ್ರೆ ಡಿ.ಸುಧಾಕರ ಅವರನ್ನು ಡ್ರಾಪ್ ಮಾಡಲು ಹೋಗಿದ್ದೆ ಅಂತ ಹೊಸದುರ್ಗದ ಶಾಸಕ ಗೂಳಿಹಟ್ಟಿ ಶೇಖರ್ ಹೇಳಿದ್ದಾರೆ.

ನಿನ್ನೆ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿಗೆ ಡಿ.ಕೆ.ಶಿವಕುಮಾರ್  ಔತಣ ಕೂಟದಲ್ಲಿ ಗೂಳಿಹಟ್ಟಿ ಶೇಖರ್ ಭಾಗಿಯಾಗಿದ್ದಾರೆ ಅಂತ ಸುದ್ದಿ ಹರಡುತ್ತಿದ್ದಂತೆ, ಇಂದು ಗೂಳಿಹಟ್ಟಿ ಶೇಖರ್ ಹೇಳಿದ್ದು ನಾನು ಬಿಜೆಪಿ ಬಿಟ್ಟು ಹೋಗುವುದಿಲ್ಲ. ಡಿ.ಸುಧಾಕರ ಅವರನ್ನು ಬಿಡಲು ಹೋಗಿದ್ದೆ ಅಲ್ಲಿ 20 ನಿಮಿಷಗಳ ಕಾಲ ಇದ್ದೆ ಅಲ್ಲಿ ನಾನು ಊಟವನ್ನು ಮಾಡಿಲ್ಲ ಅಂತ ಹೇಳಿದ್ದಾರೆ. ಇದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.