ನವದೆಹಲಿ: ಎರಡು ತಿಂಗಳು ಪಡಿತರ ಉಚಿತವಾಗಿ ನೀಡಲಾಗುವುದು. ಕೇಂದ್ರ ಮತ್ತು ರಾಜ್ಯಗಳ ಪಡಿತರ ಯೋಜನೆಯ ಫಲಾನುಭವಿಗಳು ಮಾತ್ರವಲ್ಲದೆ ನಗರಪ್ರದೇಶದ ಬಡವರು, ವಲಸೆ ಕಾರ್ಮಿಕರಿಗೆ 2 ತಿಂಗಳು ಉಚಿತವಾಗಿ ಪಡಿತರ ವಿತರಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆಯಡಿ ದೇಶದ ಯಾವುದೇ ಭಾಗದಲ್ಲಿ ಪಡಿತರ ಪಡೆಯಲು ಅವಕಾಶ ನೀಡಲಾಗಿದೆ. ರೇಷನ್ ಕಾರ್ಡ್ ಪೋರ್ಟಬಿಲಿಟಿಗೆ ಅವಕಾಶ ನೀಡಿದ್ದು ಯಾವುದೇ ರಾಜ್ಯದ ವಲಸೆ ಕಾರ್ಮಿಕರು ತಾವಿರುವ ಸ್ಥಳದಲ್ಲೇ ಪಡಿತರ ಪಡೆದುಕೊಳ್ಳಬಹುದಾಗಿದೆ. ಪಡಿತರ ಚೀಟಿ ಹೊಂದಿರದ ವಲಸೆ ಕಾರ್ಮಿಕರಿಗೆ 5 ಕೆಜಿ ಅಕ್ಕಿ ಅಥವಾ ಗೋಧಿ 1ಕೆಜಿ ಬೇಳೆ ನೀಡಲಾಗುವುದು ಎರಡು ತಿಂಗಳ ಕಾಲ ಉಚಿತವಾಗಿ ಪಡಿತರ ನೀಡಲಾಗುವುದು.

ಪ್ರತಿ ಕುಟುಂಬಕ್ಕೆ 5 ಕೆಜಿ ಇಲ್ಲವೇ ಗೋಧಿ, 1 ಕೆಜಿ ಬೇಳೆ ವಿತರಿಸಲಾಗುವುದು. ಇದಕ್ಕಾಗಿ 3,500 ಕೋಟಿ ರೂಪಾಯಿ ಅನುದಾನ ಕಾಯ್ದಿರಿಸಲಾಗಿದೆ. ಕೇಂದ್ರ ಸರ್ಕಾರವೇ ಸಂಪೂರ್ಣ ಮೊತ್ತವನ್ನು ಭರಿಸಲಿದ್ದು ರಾಜ್ಯಸರ್ಕಾರಗಳಿಗೆ ಫಲಾನುಭವಿಗಳನ್ನು ಗುರುತಿಸುವ ಜವಾಬ್ದಾರಿ ನೀಡಲಾಗಿದೆ. ಸುಮಾರು 8 ಕೋಟಿ ಫಲಾನುಭವಿಗಳಿಗೆ ಇದರಿಂದ ಅನುಕೂಲವಾಗಲಿದೆ.!