ಚಿತ್ರದುರ್ಗ: ಬಲಿಜ ಜನಾಂಗ ಒಗ್ಗಟ್ಟಿನಿಂದ ಇದ್ದಾಗ ಮಾತ್ರ ಸುಂದರ ಸಮಾಜ ಕಟ್ಟಬಹುದು ಎಂದು ಕಬೀರಾನಂದಾಶ್ರಮದ ಶಿವಲಿಂಗಾನಂದಸ್ವಾಮಿ ಕರೆ ನೀಡಿದರು.
ವಿದ್ಯಾನಗರದ ಒಂದನೆ ಮುಖ್ಯ ರಸ್ತೆಯಲ್ಲಿ ಭಾನುವಾರ ನಡೆದ ಯೋಗಿ ನಾರೇಯಣ ಬಲಿಜ ಸೌಹಾರ್ಧ ಪತ್ತಿನ ಸಹಕಾರಿ ನಿ, ಉದ್ಘಾಟನೆ ಹಾಗೂ ಪ್ರಥಮ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಸಾನಿಧ್ಯ ವಹಿಸಿ ಸ್ವಾಮಿಗಳು ಆಶೀರ್ವಚನ ನೀಡಿದರು.
ವಿಜಯನಗರ ಸಾಮ್ರಾಜ್ಯ ಆಳಿದ ಶ್ರೀಕೃಷ್ಣದೇವರಾಯ ಬಲಿಜ ಸಮಾಜಕ್ಕೆ ಸೇರಿದವರು. ಕರ್ನಾಟಕ ರಾಜ್ಯದ ಉದ್ದಗಲಕ್ಕೂ ಹೆಸರು ಮಾಡಿ ಸಾಮ್ರಾಜ್ಯವನ್ನು ಕಟ್ಟಿದಂತೆ ನೀವುಗಳು ಸಂಘಟಿತರಾಗಿ ಬಲಿಜ ಸಮಾಜವನ್ನು ಶಕ್ತಿಶಾಲಿಯನ್ನಾಗಿ ಬೆಳೆಸಿ ಎಂದು ತಿಳಿಸಿದರು.
ಛತ್ರಪತಿ ಶಿವಾಜಿಮಹಾರಾಜರು ಕಾಡಿನಲ್ಲಿರುವ ಜನರನ್ನೆಲ್ಲಾ ಒಂದುಗೂಡಿಸಿ ಸೈನ್ಯ ಕಟ್ಟಿ ಒಂದು ನಾಡನ್ನು ನಿರ್ಮಿಸಿದರು. ಹಾಗಾಗಿ ಬಲಿಜ ಜನಾಂಗಕ್ಕೆ ಸೇರಿದ ನೀವುಗಳು ಎಲ್ಲರೂ ಒಂದಾಗಿ ಸೇರಿ ಸಮಾಜಕ್ಕೆ ಶಕ್ತಿ ತುಂಬಿದಾಗ ಮಾತ್ರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಬೆಳೆಯಲು ಸಹಕಾರಿಯಾಗಲಿದೆ ಎಂದರು.
ಚಿತ್ರದುರ್ಗ ಜಿಲ್ಲಾ ಬಲಿಜ ಸಂಘದ ಅಧ್ಯಕ್ಷ ಎಂ.ಎ.ಸೇತೂರಾಂರವರು ಹಿಂದಿನ ಸರ್ಕಾರದಲ್ಲಿ ಬಲಿಜ ಜನಾಂಗದ ಅಭಿವೃದ್ದಿಗೆ ಮೂರು ಕೋಟಿ ರೂ.ಗಳನ್ನು ಬಿಡುಗಡೆಗೊಳಿಸುವಂತೆ ಕೇಳಿದ್ದರು. ಈಗಿನ ಮುಖ್ಯಮಂತ್ರಿ ಆ ಹಣವನ್ನು ಬಿಡುಗಡೆ ಮಾಡಬಹುದು. ಒಟ್ಟಾರೆ ನಿಮ್ಮ ಜನಾಂಗದ ಯಾವುದೇ ಸಭೆ, ಸಮಾರಂಭ, ಸಮಾವೇಶಗಳು ನಡೆದಾಗಿ ಎಲ್ಲರೂ ಭಾಗವಹಿಸಿದಾಗ ಮಾತ್ರ ಸದೃಢ ಸಮಾಜವಾಗಿ ಬೆಳೆಯಬಹುದು ಎಂದರು.
ಯೋಗಿನಾರೇಯಣ ಬಲಿಜ ಸೌಹಾರ್ಧ ಪತ್ತಿನ ಸಹಕಾರಿ ನಿಗಮದ ಗೌರವಾಧ್ಯಕ್ಷ ಆರ್.ಕೆ.ನಾಯ್ಡು ಮಾತನಾಡುತ್ತ ಯಾವುದೇ ಒಂದು ಸಂಸ್ಥೆ ಮುನ್ನಡೆಯಬೇಕಾದರೆ ಬಲಿಜ ಜನಾಂಗದವರು ತನು, ಮನ, ಧನವನ್ನು ಸಮರ್ಪಿಸಬೇಕು. ಪಂಡರಹಳ್ಳಿ ನಂಜುಂಡಪ್ಪ ಮೊದಲು ಬಲಿಜ ಸಂಘವನ್ನು ಹುಟ್ಟು ಹಾಕಿದರು ಎಂದು ನೆನಪಿಸಿಕೊಂಡರು. .
ಜಿಲ್ಲಾ ಬಲಿಜ ಸಮಾಜದ ಅಧ್ಯಕ್ಷ ಎಂ.ಎ.ಸೇತೂರಾಂ, ನಗರಸಭೆ ಅಧ್ಯಕ್ಷ ಹೆಚ್.ತಿಮ್ಮಣ್ಣ ಮಾತನಾಡಿದರು.
ಯೋಗಿನಾರೇಯಣ ಬಲಿಜ ಸೌಹಾರ್ಧ ಪತ್ತಿನ ಸಹಕಾರಿ ನಿ. ಅಧ್ಯಕ್ಷ ಎಂ.ಕೆ.ಪ್ರಹ್ಲಾದ್ ಅಧ್ಯಕ್ಷತೆ ವಹಿಸಿದ್ದರು.
ಬಲಿಜ ಮುಖಂಡ ವೈ.ಹನುಮಂತಪ್ಪ, ದಾವಣಗೆರೆ ಜಿಲ್ಲಾ ಬಲಿಜ ಸಂಘದ ಅಧ್ಯಕ್ಷ ಟಿ.ಜಿ.ನಾರಾಯಣಸ್ವಾಮಿ, ನಟರಾಜ್ ವೇದಿಕೆಯಲ್ಲಿದ್ದರು.