ಬೆಂಗಳೂರು: ಯಾವುದೇ ಸ್ವಾಮೀಜಿಗಳು ಒಂದು ಸಮುದಾಯಕ್ಕೆ ಸೇರಿದವರಲ್ಲ ಅಂತ ದೀಕ್ಷೆ ತೆಗೆದುಕೊಳ್ಳುವಾಗ ಪ್ರಮಾಣಮಾಡಿರುತ್ತಾರಂತೆ ಆದ್ರೆ ಕಾಲ ಬದಲಾಗಿದೆ. ಒಂದೊಂದು ಸಮುದಾಯಕ್ಕೆ ಒಬೊಬ್ಬ ಸ್ವಾಮೀಜಿಗಳು ತಲೆಎತ್ತಿ ನಿಂತಿದ್ದಾರೆ.

ಆದ್ರೆ ಇಂದಿನ ದೋಸ್ತಿ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ, ಒಬೊಬ್ಬ ಸ್ವಾಮೀಜಿ ಸಿದ್ದರಾಮಯ್ಯರ ಪರ ನಿಂತ್ರೆ ಮತ್ತೊಬ್ಬ ಸ್ವಾಮೀಜಿ ಕುಮಾರಸ್ವಾಮಿ ಪರ ನಿಂತಿದ್ದಾರೆ.   

ಕೆಂಪೇಗೌಡರ ದಿನಾಚರಣೆಯಲ್ಲಿ ನಂಜಾವಧೋತ ಸ್ವಾಮೀಜಿ ಮಾತನಾಡುತ್ತಾ,  ಮುಖ್ಯ ಮಂತ್ರಿ ಕುಮಾರಸ್ವಾಮಿಯವರ ಸರಕಾರವನನ್ನು ಉರುಳಿಸಲು ಮುಂದಾದವರಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಹೇಳಿದ ಬೆನ್ನಲ್ಲೆ ಇಂದು

ಕಾಗಿನೆಲೆ ಮಹಾ ಸಂಸ್ಥಾನದ ಪೀಠಾಧ್ಯಕ್ಷರಾದ ನಿರಂಜನಾನಂದಪುರಿ ಶ್ರೀಗಳು ರಾಜ್ಯದ ಮೈತ್ರಿ ಸರಕಾರ ಕುರುಬ ಸಮುದಾಯದ ಅಧಿ ಕಾರಿಗಳನ್ನು ಹತ್ತಿಕ್ಕುವ ಕಾರ್ಯ ಮಾಡುತ್ತಿದೆ. ಹೀಗೆ ಮುಂದುವರೆದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುತ್ತೆ ಎಂದು ಹೇಳಿದ್ದಾರೆ.

ಹೀಗಾಗಿ ಮಠದ ಸ್ವಾಮೀಜಿಗಳು ರಾಜಕೀಯದಲ್ಲಿ ತಲೆತೂರಿಸಿದರೆ ಹೇಗಪ್ಪ ಅಂತ ಇಲ್ಲೊಬ್ಬರ ಮಾತು.