ಗಂಗಾವತಿ: ನರೇಂದ್ರ ಮೋದಿಯವರು ಗಂಗಾವತಿಯಲ್ಲಿ ಬೃಹತ್ ಸಮಾವೇಶದಲ್ಲಿ ಮೊದಲಿಗೆ ಕನ್ನಡದಲ್ಲಿಯೇ ಭಾಷಣ ಆರಂಭಿಸಿದರು. ಆರಂಭದಲ್ಲಿ ಭರತ್ ಮಾತಾ ಕಿ ಜೈ ಎಂದು ಘೋಷಣೆ ಮೊಳಗಿಸಿದರು.

ಈ ಭಾಗದ ಗವಿ ಸಿದ್ಧೇಶ್ವರರ ಚರಣಗಳಿಗೆ, ಗವಿಮಠದ ಭಕ್ತಪರಂಪರೆಗೆ ಹಾಗೂ ಈ ಭೂಮಿಯಲ್ಲಿ ಜನಿಸಿದ ಎಲ್ಲಾ ಮಹಾತ್ಮರಿಗೆ ನನ್ನ ನಮಸ್ಕಾರಗಳು ಎಂದು ಹೇಳುತ್ತಿದ್ದಂತೆ ನೆರೆದಂತ ವರು ಜೈಕಾರ ಹಾಕಿದರು.

ಸಿಎಂ ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ ಮಾಡಿದ್ರಾ ಎಂದು ಪ್ರಶ್ನೆ ಹಾಕುತ್ತಾ, ರೈತರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಪ್ರತಿ ರೈತ ಕುಟುಂಬಕ್ಕೆ ತಲಾ 6000 ರೂ. ನೀಡಲು ನಿರ್ಧರಿಸಿ ಕಿಸಾನ್ ಸಮ್ಮಾನ್ ಯೋಜನೆ ಜಾರಿಗೊಳಿಸಿದೆ ಎಂದರು.

ಆದರೆ ಯೋಜನೆ ಅಡಿ ಫಲಾನುಭವಿಗಳ ಪಟ್ಟಿ ಕಳುಹಿಸಲು ಇಲ್ಲಿನ ಸರ್ಕಾರ ವಿಳಂಬ ಮಾಡಿ ಯೋಜನೆಗೆ ಅಡ್ಡಿ ಮಾಡಿತು ಎಂದು ಆರೋಪಿಸಿದರು. ಯೋಜನೆ ಅಡಿಯಲ್ಲಿ 5 ಎಕರೆಗೂ ಮೇಲ್ಪಟ್ಟು ಭೂಮಿ ಹೊಂದಿದ ರೈತರ ಖಾತೆಗೂ ಕೂಡ ಹಣ ಸಂದಾಯ ಮಾಡುತ್ತೇವೆ ಎಂದರು.