ನವದೆಹಲಿ : ಆದಾಯ ತೆರಿಗೆದಾರರಿಗೆ ಕೇಂದ್ರ ಸರ್ಕಾರವು ಭರ್ಭರಿ ಸಿಹಿಸುದ್ದಿ ನೀಡಿದ್ದು, 2019-20 ನೇ ಹಣಕಾಸು ವರ್ಷದ ಐಟಿ ರಿಟರ್ನ್ ಸಲ್ಲಿಕೆ ಗುಡವನ್ನು ನವೆಂಬರ್ 30 ರವರೆಗೆ ವಿಸ್ತರಿಸಲಾಗಿದೆ.

ದೇಶದಲ್ಲಿ ಕೊರೊನಾ ವೈರಸ್ ನಿಂದ ಉದ್ಭವಿಸಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಆದಾಯ ತೆರಿಗೆ ವಿವರ ಸಲ್ಲಿಕೆ ಗಡುವನ್ನು ನವೆಂಬರ್ 30 ರವರೆಗೆ ವಿಸ್ತರಿಸಲಾಗಿದೆ. 2019-20 ನೇ ಸಾಳಿಗೆ ತೆರಿಗೆ ಉಳಿತಾಯಕ್ಕೆ ಅನುಕೂಲವಾಗುವ ಹೂಡಿಕೆ, ಪಾವತಿಗಳ ಅಂತಿಮ ಗಡುವನ್ನು ಜುಲೈ 31 ರವರೆಗೆ ಇಲಾಖೆ ವಿಸ್ತರಿಸಿತ್ತು. ಈ ಕ್ರಮ 2019-20 ನೇ ಸಾಲಿನ ತೆರಿಗೆಯಲ್ಲಿ ಕಡಿತಕ್ಕಾಗಿ ಕ್ಲೇಮ್ ಸಲ್ಲಿಸುವ ಹೂಡಿಕೆಗಳನ್ನು ಮಾಡಲು ಜುಲೈ 31 ರವರೆಗೆ ಅವಕಾಶ ಕಲ್ಪಿಸಿದೆ.