ಬೆಂಗಳೂರು: ಐಟಿ ದಾಳಿಯಲ್ಲಿ ಕಂಟ್ರಾಕ್ಟರ್ ಮನೆಯಲ್ಲಿ ಸಿಕ್ತು ಕೋಟಿ ಕೋಟಿ ಹಣ.! ಬೆಂಗಳೂರು ಹಾಗೂ ಮೈಸೂರಿನಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ  ಕಂಟ್ರಾಕ್ಟರ್ ಮನೆಯಲ್ಲಿ ಬಂಗಾರ ಮತ್ತು ಹಣ ಸಿಕ್ಕಿದೆ.

ಈ ಹಣವನ್ನು ಚುನಾವಣೆಯ ಬಳಸುವ ಉದ್ದೇಶದಿಂದ ಹಣ ಸಂಗ್ರಹಿಸಿರುವ ಆರೋಪದ ಹಿನ್ನಲೆಯಲ್ಲಿ ಮೈಸೂರಿನ 10 ಮತ್ತು ಬೆಂಗಳೂರಿನ ಒಬ್ಬ ಕಂಟ್ರಾಕ್ಟರ್ ಮೇಲಿನ ಐಟಿ ದಾಳಿ ನಡೆಸಿ ಐನೂರು ಮತ್ತು 2000 ಮುಖಬೆಲೆಯ 10.62 ಕೋಟಿ , 1.33 ಕೋಟಿ ಮೌಲ್ಯದ ಚಿನ್ನಾಭರಣ ನಗದು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದ್ದು, ಬಂಗಾರ ಹಾಗೂ ಹಣದ ಬಗ್ಗೆ ವಿಚಾರಣೆಯನ್ನು ಐಟಿ ಅಧಿಕಾರಿಗಳು ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.