ಬೆಂಗಳೂರು : ಸಿಸಿಬಿ ಅಪರಾಧ ವಿಭಾಗದ ಐಜಿಪಿ ಅಲೋಕ್ ಕುಮಾರ್ ಅವರು ರೌಡಿಗಳ ಪರೇಡ್ ವೇಳೆ ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿ,  ಬಿಳಿ ಶರ್ಟ್ ಹಾಕಿಕೊಂಡು ಅಕ್ರಮ ದಂಧೆ ನಡೆಸುತ್ತೀರ,  ರಿಯಲ್ ಎಸ್ಟೇಟ್ ದಂಧೆ ನಡೆಸಿಕೊಂಡು ಹಣ ಮಾಡಿಕೊಂಡು ರಾಜಕೀಯಕ್ಕೆ ಬಂದು ಇಡೀ ವ್ಯವಸ್ಥೆ ಹಾಳು ಮಾಡುತ್ತೀರಾ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅಲೋಕ್ ಕುಮಾರ್, ಮಹಾತ್ಮ ಗಾಂಧಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವ ಸಲುವಾಗಿ ರೌಡಿಗಳ ಪರೇಡ್ ನಡೆಸಿ ಅಹಿಂಸೆಯಿಂದ ಬದುಕುವಂತೆ ಬುದ್ದಿ ಮಾತು ಹೇಳಲಾಗಿದೆ. ಹಫ್ತಾ ವಸೂಲಿ, ಗಲಾಟೆ, ಹೆಣ್ಣು ಮಕ್ಕಳ ಜೊತೆ ಅಸಭ್ಯವಾಗಿ ನಡೆಸಿಕೊಂಡರೆ ಐತೆ ನಿಮಗೆಲ್ಲಾ ಎಂದು ಖಡಕ್ ಎಚ್ಚರಿಕೆ ನೀಡಿರುವುದು ರೌಡಿಗಳ ಪಾಲಿಗೆ ಸಿಂಹ ಸ್ವಪ್ನರಾಗಿದ್ದಾರೆ.