ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಏ.17ಕ್ಕೆ ಪ್ರಕಟವಾಗುತ್ತದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು.

ಇದಕ್ಕೆ ಸ್ಪಷ್ಟನೆ ನೀಡಿದ ಪದವಿಪೂರ್ವ ಶಿಕ್ಷಣ ಮಂಡಳಿ ನಿರ್ದೇಶಕಿ ಸಿ. ಶಿಖಾ, ದ್ವಿತೀಯ ಪಿಯುಸಿ ಫಲಿತಾಂಶ ಏ.17ಕ್ಕೆ ಪ್ರಕಟ ಆಗುವುದಿಲ್ಲ. ಫಲಿತಾಂಶದ ದಿನಾಂಕವನ್ನು ಒಂದೆರಡು ದಿನಗಳಲ್ಲಿ ತಿಳಿಸಲಾಗುವುದು ಎಂದು ಹೇಳಿದ್ದಾರೆ.

ಪಿಯು ಫಲಿತಾಂಶದ ಒತ್ತಡ ವಿದ್ಯರ್ಥಿಗಳ ಮೇಲೆ ಬೀಳಬಾರದೆಂದು ಸಿಇಟಿ ಫಲಿತಾಂಶ ಬಂದ ಬಳಿಕ ಪಿಯು ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಸಿಇಟಿ ಮೂಲಗಳು ತಿಳಿಸಿವೆ ಎಂಬುದು ಸುದ್ದಿ.