ಬೆಂಗಳೂರು; ಸಚಿವ ಮಾಧುಸ್ವಾಮಿ ಇಂದು ಮಾತನಾಡಿದ್ದು, ಸಂಪುಟ ಸಭೆಯಲ್ಲಿ ಆನ್ ಲೈನ್ ಕ್ಲಾಸ್ ಬಗ್ಗೆ ಚರ್ಚಿಸಲಾಗಿದ್ದು, 5ನೇ ತರಗತಿ ಬದಲಿಗೆ 7ನೇ ತರಗತಿವರೆಗೆ ಆನ್ ಲೈನ್ ಕ್ಲಾಸ್ ರದ್ದು ಮಾಡಲಾಗಿದೆ.

ಎಸ್ಎಸ್ಎಲ್ ಸಿ ಪರೀಕ್ಷೆ ನಿಗದಿಯಂತೆ ನಡೆಯಲಿದೆ ಎಂದಿದ್ದಾರೆ. ಬೆಂಗಳೂರು ಕೇಂದ್ರ ವಿವಿಗೆ ಬೆಂಗಳೂರು ಸಿಟಿ ವಿವಿ ಎಂದು ನಾಮಕರಣ ಮಾಡಲು ಸರ್ಕಾರ ನಿರ್ಧರಿಸಿದೆ. ಸಹಕಾರಿ ಸಕ್ಕರೆ ಕಾರ್ಖಾನೆ ಹೊರತುಪಡಿಸಿ, ಉಳಿದೆಲ್ಲಾ ಸಹಕಾರ ಸಂಘಗಳಿಗೆ ಚುನಾವಣೆ ನಡೆಸಲಿದೆ ಎಂದು ಸ್ಪಷ್ಟಪಡಿಸಿದರು.