ನವದೆಹಲಿ: ಕೊರೋನಾ ವೈರಸ್ ಹರಡುತ್ತಿರುವ ಹಿನ್ನೆಲೆ ದೂರವಾಣಿ ಸಂವಹನ ಕಂಪನಿ ಏರ್ಟೆಲ್ ಸದ್ಯ ಕಡಿಮೆ ಆದಾಯ ಹೊಂದಿದ ತನ್ನ ಗ್ರಾಹಕರ ನೆರವಿಗೆ ಬಂದಿದ್ದು, ತನ್ನ 80 ಮಿಲಿಯನ್ ಪ್ರೀ-ಪೈಡ್ ಗ್ರಾಹಕರಿಗೆ 48 ಗಂಟೆಗಳ ಬಳಿಕ ಅನ್ವಯವಾಗುವಂತೆ ನೂತನ ಯೋಜನೆ ಘೋಷಿಸಿದೆ.

ಗ್ರಾಹಕರು ತಮ್ಮ ರಿಚಾರ್ಜ್ ಪ್ಯಾಕ್ ಕೊನೆಗೊಂಡಿದ್ದರೂ ಕೂಡ ಏ.17ರವರೆಗೆ ಉಚಿತವಾಗಿ ಒಳ ಬರುವ ಕರೆಗಳನ್ನು ಸ್ವೀಕರಿಸಬಹುದಾಗಿದ್ದು, 10 ರೂ. ಉಚಿತ ಟಾಕ್ ಟೈಮ್ ಬ್ಯಾಲನ್ಸ್ ಕೂಡ ಪಡೆಯಲಿದ್ದಾರೆ ಎಂದು ಕಂಪನಿ ಸ್ಪಷ್ಟಪಡಿಸಿದೆ.